ಇತ್ತೀಚಿನ ಸುದ್ದಿ
ಪುತ್ತೂರಿನ ಪ್ರವಾಸಿಗರಿದ್ದ ಕಾರು ಚಿಕ್ಕಮಗಳೂರಿನ ಬಣಕಲ್ ಬಳಿ ಪಲ್ಟಿ: 6 ಮಂದಿಗೆ ಸಣ್ಣಪುಟ್ಟ ಗಾಯ
24/07/2022, 14:00
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಚಿಕ್ಕಮಗಳೂರಿಗೆ ಪ್ರವಾಸ ಮಾಡಲು ಬಂದ ಪ್ರವಾಸಿಗರಿದ್ದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಎರಡು ಪಲ್ಟಿ ಹೊಡೆದು ಗದ್ದೆಗೆ ಉರುಳಿದ ಘಟನೆ ಹೆಬ್ಬರಿಗೆಯಲ್ಲಿ ನಡೆದಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಿಂದ ಗದ್ದೆಗೆ ಪಲ್ಟಿ ಹೊಡೆದ ಇನೋವಾ ಕಾರ್
ಇನೋವಾ ಕಾರಿನಲ್ಲಿದ್ದ 6 ಮಂದಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಟ್ಟಿಗೆಹಾರ ಮತ್ತು ಬಣಕಲ್ ಹೆದ್ದಾರಿಯ ಮದ್ಯ ಹೆಬ್ಬರಿಗೆ ಸಮೀಪ ನಡೆದ ಅವಘಡ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.