ಇತ್ತೀಚಿನ ಸುದ್ದಿ
Good News: ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ..!!; ಲಿಂಗ ತಾರತಮ್ಯ ಕೊನೆಗೊಳ್ಳಲಿ
22/07/2022, 14:37

ತಿರುವನಂತಪುರ(reporterkarnataka.com): ಹೆಣ್ಮಕ್ಕಳ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗುಡ್ ನ್ಯೂಸ್ ಹೊರಬಿದ್ದಿದೆ. ಕೇರಳದಿಂದ ಈ ಶುಭಸುದ್ದಿ ಬಂದಿದೆ. 2020ರ ವಾರ್ಷಿಕ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ದಶಕದಲ್ಲೇ ಗರಿಷ್ಟ ಪ್ರಮಾಣದಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಏರಿಕೆ ದಾಖಲಿಸಿಕೊಂಡಿದೆ.
ಈ ಹೊಸ ಅಂಕಿ ಅಂಶ ನೀಡುತ್ತಿರುವ ಅನುಪಾತವು ಸರಾಸರಿ 1000 ಪುರುಷರಿಗೆ 968 ಮಹಿಳೆಯರು ಎಂಬುದಾಗಿದೆ.
2020ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 138910 ಶಿಶುಗಳು ಜನಿಸಿದ್ದರೆ, ನಗರ ಪ್ರದೇಶದಲ್ಲಿ 307981 ಶಿಶುಗಳು ಜನಿಸಿವೆ. ಹೆಚ್ಚಿನ ಜನನಗಳು ಜೂನ್, ನವೆಂಬರ್ ತಿಂಗಳಿನಲ್ಲಿ ಸಂಭವಿಸಿವೆ.
2019, 2018 ಮತ್ತು 2011ರಲ್ಲಿ ಅನುಕ್ರಮವಾಗಿ 1000 ಪುರುಷರಿಗೆ 960, 963 ಮತ್ತು 939 ರಷ್ಟಿತ್ತು. 2020ರಲ್ಲಿ ಒಟ್ಟು 446891 ಮಕ್ಕಳು ಜನಿಸಿದ್ದಾರೆ. ಈ ಪೈಕಿ 227053 ಗಂಡು ಮಕ್ಕಳು ಮತ್ತು 219809 ಹೆಣ್ಮಕ್ಕಳು ಜನಿಸಿದ್ದಾರೆ. 29 ಮಕ್ಕಳ ಲಿಂಗವನ್ನು ದಾಖಲಿಸಲಾಗಿರಲಿಲ್ಲ.