ಇತ್ತೀಚಿನ ಸುದ್ದಿ
ತೆಕ್ಕಟ್ಟೆ ಜಂಕ್ಷನ್ ನ ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ: ನಗದು ಸಹಿತ ಇಬ್ಬರ ವಶ
21/07/2022, 12:07
ಕೋಟ(reporterkarnataka.com): ಮಟ್ಕಾ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು,3,150 ರೂ. ಹಾಗೂ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡ ಘಟನೆ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ಬಳಿ ನಡೆದಿದೆ.
ಉಳ್ತೂರು ನಿವಾಸಿ 51 ವರ್ಷದ ನರಸಿಂಹ ಹಾಗೂ ತೆಕ್ಕಟ್ಟೆ ನಿವಾಸಿ 53 ವರ್ಷದ ಬಾಬು ಪೂಜಾರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.