7:44 PM Friday27 - February 2026
ಬ್ರೇಕಿಂಗ್ ನ್ಯೂಸ್
ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ… ಖಾಲಿಯಿರುವ ಹುದ್ದೆಗಳ ಹಂತ ಹಂತವಾಗಿ ಭರ್ತಿ: ಕಾರ್ಕಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ, ಡಿಸಿಎಂ ಕುರ್ಚಿ ಕಾಳಗದಲ್ಲಿ ಬ್ಯುಸಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು…

ಇತ್ತೀಚಿನ ಸುದ್ದಿ

ಒಂದೇ ಕುಟುಂಬದ ಎಲ್ಲ 5 ಮಂದಿಗೂ ಬೆರಳುಗಳೇ ಶಾಪ!!: ಸಹಜ ಕೆಲಸಕ್ಕೆ ಅಡ್ಡಿ; ಆರ್ಥಿಕ ಸಂಕಷ್ಟ!

19/07/2022, 11:00

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ತಾಂಡದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ತಮ್ಮ ಕೈ ಕಾಲುಗಳಲ್ಲಿ ಒಟ್ಟು ತಲಾ 24, 28, 32 ಬೆರಳುಗಳನ್ನು ಹೊಂದಿದ್ದಾರೆ. ಇದು ವಿಚಿತ್ರವಾದರೂ ಸತ್ಯ ಸಂಗತಿಯಾಗಿದೆ. 


ಜಗದೀಶ ನಾಯ್ಕ ಎಂಬ ಕುಟುಂಬದ ಸದಸ್ಯರು ಅವರ ತಾಯಿ ಸೇರಿದಂತೆ ಮನೆಯ ಒಟ್ಟು 5 ಮಂದಿ ಸದಸ್ಯರು ಕೈಯಲ್ಲಿ ಆರು, ಏಳು, ಎಂಟು ಬೆರಳುಗಳನ್ನು ಹೊಂದಿದ್ದಾರೆ. ಅವು ಪರಸ್ಪರ ಹೊಂದಿಕೊಂಡಿದ್ದು ಸಹಜವಾಗಿ ಎಲ್ಲರಂತೆ ಕೆಲ ಕಾರ್ಯಮಾಡಲಾಗುತ್ತಿಲ್ಲ. ಅವರ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದ ಕಾರಣ ಅವರನ್ನು ವಿಶಿಷ್ಟ ಚೇತನರೆಂದು ಪರಿಗಣಿಸಲಾಗಿದೆ. ಎಲ್ಲರಂತೆ ಸಹಜವಾಗಿ ದುಡಿಮೆ ಮಾಡಲಾಗದೇ ತೀರಾ ಆರ್ಥಿಕ ಸಂಕಷ್ಟವನ್ನು ಕುಟುಂಬ ಸದಸ್ಯರು ಎದುರಿಸುತ್ತಿದ್ದಾರೆ. ಅವರ ನೆರವಿಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮುಂದಾಗಬೇಕಿದೆ. ಕುಟುಂಬಕ್ಕೆ ಆರ್ಥಿಕ ಸಾಲ ಸೌಲಭ್ಯ ನೀಡಿ, ಅವರು ಸ್ವಾವಲಂಬಿ ಜೀವನ ನಡೆಸಲು ಅಗತ್ಯ ನೆರವನ್ನು ಸರ್ಕಾರ ಮಾಡಬೇಕಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು