ಇತ್ತೀಚಿನ ಸುದ್ದಿ
ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಿದ ಕುದ್ರೋಳಿ ಕೋಶಾಧಿಕಾರಿ ಆರ್.ಪದ್ಮರಾಜ್
16/07/2022, 19:41

ಮಂಗಳೂರು:Reporterkarnataka.com: ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಹಾಗೂ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ್ಯ ದೇವೆಂದ್ರ ಪುಜಾರಿ ಧರ್ಮಸ್ಥಳ ಕ್ಷೇತ್ರದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ನಂತರ ಮಾತನಾಡಿದ ಪದ್ಮರಾಜ್, ರಾಜ್ಯ ಸಭೆಗೆ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ನಾಮನಿರ್ದೇಶನ ಗೊಂಡಿರುವುದು ತುಳುನಾಡಿಗೆ ಹೆಮ್ಮೆಯ ವಿಚಾರ ವಾಗಿದೆ.
ತುಳುಭಾಷೆಯನ್ನು 8ನೇ ಪರಿಚ್ಛೇದ ಕ್ಕೆ ಏರಿಸುವುದು ನಮ್ಮೆಲರ ಕನಸು, ಸತತವಾಗಿ ಪ್ರಯತ್ನ ಪಟ್ಟರು ಈನ್ನೂ ಆಯ್ಕೆಯಾಗಿಲ್ಲ. ಅದರಿಂದ ಧರ್ಮಧಿಕಾರಿಗಳು ನಾಮನಿರ್ದೇಶನಗೊಂಡಿರುವುದು ತುಳುಭಾಷೆ ಆಯ್ಕೆ ಯಾಗುವುದೆಂದು ನಮ್ಮ ಆಶಾಭಾವನೆ ಎಂದು ಅವರು ಸಂತಸ ವ್ಯಕ್ತ ಪಡಿಸಿದರು.
ಇದೇ ವೇಳೆ ನಾರಾಯಣ ಗುರುಗಳ ಭಾವಚಿತ್ರವಾಗಿ ಕೊಡುಗೆಯಾಗಿ ನೀಡಿದರು.