ಇತ್ತೀಚಿನ ಸುದ್ದಿ
ಕುರ್ಲಾ: ಜು.17ರಂದು ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ- 2022; ಪಮ್ಮಿ ಕೊಡಿಯಾಲ್ ಬೈಲ್ ಸಹಿತ 9 ಮಂದಿಗೆ ಸನ್ಮಾನ
14/07/2022, 19:18

ಮುಂಬಯಿ(reporterkarnataka.com): ಕನ್ನಡ ನಾಡು- ನುಡಿ- ಸಂಸ್ಕೃತಿಯನ್ನು ಬಿಂಬಿಸುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ- 2022 ಕುರ್ಲಾದ ಬಂಟರ ಭವನದಲ್ಲಿ ಜುಲೈ 17ರಂದು ನಡೆಯಲಿದೆ.
ಸಮಾರಂಭದಲ್ಲಿ ರಾಷ್ಟಭಕ್ತಿ, ನಾಡಪ್ರೀತಿ, ಕನ್ನಡದ ಕಂಪು ಬೀರಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಮಂದಿಯನ್ನು ಸನ್ಮಾನಿಸಲಾಗುವುದು. ಮುಂಬಯಿ ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಹೆಸರು, ಕವಯತ್ರಿ, ಲೇಖಕಿ ಡಾ. ಸುನೀತಾ ಶೆಟ್ಟಿ, ಕರ್ನಾಟಕ ಜನಪದ ಅಕಾಡೆಮಿ ದ.ಕ. ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ವೈದ್ಯಕೀಯ ಕ್ಷೇತ್ರದ ಡಾ. ಸುರೇಶ್ ರಾವ್, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ, ಪ್ರಗತಿಪರ ಕೃಷಿಕ ಪ್ರಭಾಕರ ಕಲ್ಲೂರಾಯ ಹಾಗೂ ವಾಸ್ತು ತಜ್ಞ ಮಾರ್ತಾಂಡ ಪಂಡಿತ್ ನವೀನ್ ಚಂದ್ರ ಸನಿಲ್ ಅವರನ್ನು ಸನ್ಮಾನಿಸಲಾಗುವುದು.
ಪಮ್ಮಿ ಕೊಡಿಯಾಲ್ ಬೈಲ್ ಎಂದೇ ಖ್ಯಾತರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ಪ್ರಸ್ತುತ ಕರ್ನಾಟಕದ ಜನಪದ ಅಕಾಡೆಮಿಯ ದ.ಕ.ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಓಬಿಸಿ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಂಗಳೂರು ವಿವಿ ತುಳು ಅಧ್ಯಯನ ಪೀಠದ ಸದಸ್ಯರೂ ಹೌದು. ಪಮ್ಮಿ ಕೊಡಿಯಾಲ್ ಬೈಲ್ ಅವರು ರಂಗಾಸಕ್ತರು, ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿಯೂ ಅವರಿಗೆ ಅಪಾರ ಒಲವಿದೆ.