ಇತ್ತೀಚಿನ ಸುದ್ದಿ
ಜಯಪುರ- ಹೊರನಾಡು ರಸ್ತೆಯ ಗುಡ್ಡೆತೋಟದಲ್ಲಿ ಭಾರೀ ಗುಡ್ಡ ಕುಸಿತ: ಸಂಚಾರ ಸ್ಥಗಿತ
10/07/2022, 13:53
ಶಶಿ ಬೆತ್ತದಕೊಳಲುಕೊಪ್ಪ
info.reporterkarnataka@gmail.com
ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಜಯಪುರದಿಂದ ಹೊರನಾಡು ಹೋಗುವ ರಸ್ತೆ ಮಧ್ಯೆ ಗುಡ್ಡೆತೋಟ ಎಂಬಲ್ಲಿ ರಾತ್ರಿ ಧರೆ ಕುಸಿದು ಬೃಹದಾಕಾರದ ಮರಗಳು ರಸ್ತೆಗೆ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಮುಂಜಾನೆ ಸುಮಾರು 6 ಗಂಟೆಗೆ ಮಳೆಯನ್ನು ಲೆಕ್ಕಿಸದೆ ಸ್ಥಳೀಯರು ತೆರವು ಮಾಡುವ ಸಂಧರ್ಭದಲ್ಲಿ ಜಯಪುರ ಪೋಲಿಸ್ ಅಧಿಕಾರಿಗಳು ನೆರವು ನೀಡಿದರು.ಪಿಡಬ್ಲ್ಯೂ ಅಧಿಕಾರಿಗಳು ತುರ್ತಾಗಿ ಜೆಸಿಬಿ ವ್ಯವಸ್ಥೆ ಮಾಡಿಕೊಟ್ಟಿದ್ದರಿಂದ ತೆರವು ಮಾಡಲಾಯಿತು..
ಮಳೆ ಜೋರಾಗಿದ್ದು ಮತ್ತೆ ಕುಸಿಯುವ ಭೀತಿಯೂ ಇದ್ದು ಸ್ಥಳೀಯರು ಪ್ರವಾಸಿಗರು ಸಂಚರಿಸುವಾಗ ಎಚ್ಚರವಹಿಸಬೇಕೆಂದು ಗುಡ್ಡೆತೋಟ ಪಂಚಾಯಿತಿ ಅಧ್ಯಕ್ಷರಾದ ಕೀರ್ತೀ ಸುಂದರ್ ರಾಜ್ ಮನವಿ ಮಾಡಿದರು.