ಇತ್ತೀಚಿನ ಸುದ್ದಿ
ಮೀಸಲಾತಿ ಹೋರಾಟ: ಜುಲೈ11ರ ಧರಣಿ ಯಶಸ್ವಿಗೊಳಿಸಿ:ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಸ್. ಸುರೇಶ್ ಮನವಿ
09/07/2022, 22:46
ವಿ.ಜಿ.ವೃಷಭೇಂದ್ರ ಕೂಡ್ಲಿಗಿವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಹೋರಾಟದ ಮುಂದುವರಿದ ಭಾಗವಾಗಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜುಲೈ 11ರಂದು ನಡೆಯಲಿರುವ ಧರಣಿ ಸತ್ಯಾಗ್ರಹ ಹಾಗೂ ಜಿಲ್ಲಾಧಿಕಾರಿಗಳ ಮುತ್ತಿಗೆ ಯಶಸ್ವಿಗೊಳಿಸಬೇಕೆಂದು ಕೂಡ್ಲಿಗಿ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಎಸ್.ಸುರೇಶ ಮನವಿ ಮಾಡಿದ್ದಾರೆ.
ಮೀಸಲಾತಿ ಹೋರಾಟದ ಹಿನ್ನಲೆಯಲ್ಲಿ ಮುಂದುವರಿದ ಭಾಗವಾಗಿ ಜರುಗುತ್ತಿದ್ದು. ವಾಲ್ಮೀಕಿ ಸ್ವಾಮೀಜಿಯವರು ಸರ್ಕಾರದ ನಿರ್ಲಕ್ಷ್ಯಧೋರಣೆಯ ವಿರುದ್ಧ, ಧರಣಿ ನಡೆಸುತ್ತಿರುವ ಹೋರಾಟ 150ನೇ ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳ ಆವರಣದಲ್ಲಿ ದಲಿತ ಸಮುದಾಯಗಳಿಂದ, ಧರಣಿ ನಡೆಸಲು ಸ್ವಾಮೀಜಿಗಳು ಕರೆ ನೀಡಿದ್ದಾರೆ.
ಜುಲೈ11ರಂದು ವಿಜಯನಗರ ಜಿಲ್ಲಾದಿಕಾರಿಗಳ ಆವರಣದಲ್ಲಿ ನಡೆಯಲಿರುವ ಧರಣಿ ಮತ್ತು ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ಸರ್ವ ದಲಿತ ಮುಖಂಡರು ಭಾಗಿಯಾಗಬೇಕಿದೆ. ಎಲ್ಲಾ ದಲಿತ ಹೋರಾಟಗಾರರು ಪಕ್ಷಾತೀತವಾಗಿ ಭಾಗವಹಿಸಿ ಹೋರಾಟ ಯಶಸ್ವೀಗೊಳಿಸಬೇಕಿದೆ ಎಂದು ದಲಿತ ಮುಖಂಡ ಸುರೇಶ ಕೋರಿದ್ದಾರೆ.
ದಲಿತ ಯುವ ಮುಖಂಡ ಸಾಲುಮನಿ,ವಾಲ್ಮೀಕಿ ಯುವ ಮುಖಂಡ ಚೌಡಪ್ಪ(ಸೋವೆ) ಉಪಸ್ಥಿತರಿದ್ದರು.