1:19 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ…

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಸಾಧಕರಿಗೆ ನಾಳೆ ಗೌರವ ಸನ್ಮಾನ

08/07/2022, 18:19

ಕಿನ್ನಿಗೋಳಿ(reporterkarnataka.com):  ಯುಗಪುರುಷ ಪತ್ರಿಕೆ ತನ್ನ 75ನೇ ವರ್ಷದ ಸಂಭ್ರಮಾಚರಣೆಯನ್ನ ಆಚರಿಸುತ್ತಿದ್ದು, ಈ ಸಂಭ್ರಮೋತ್ಸವವನ್ನು ಆರದಿರಲಿ ಬದುಕು ಆರಾಧನಾ ತಂಡದ ಜತೆ ಜಂಟಿಯಾಗಿ ಹಮ್ಮಿಕೊಳ್ಳಲಿದೆ ಎಂದು ಯುಗಪುರುಷ ಪತ್ರಿಕೆ ಸಂಪಾದಕರಾದ ಭುವನಾರಾಮ ಉಡುಪ ಹಾಗೂ ಆರದಿರಲಿ ಬದುಕು ತಂಡದ ನಿರ್ವಾಹಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮದ ಪ್ರಯುಕ್ತ ಕಿನ್ನಿಗೋಳಿ  “ಯುಗಪುರುಷ “ಸಭಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರಾವಳಿ ಕರ್ನಾಟಕದ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಸಾಧಕರಿಗೆ ನಾಳೆ(ಜುಲೈ 9)
ಗೌರವ ಸನ್ಮಾನ ನಡೆಸಲಾಗುವುದು ಎಂದು ಆಯೋಜಕರಾದ ಭುವನಾರಾಮ ಉಡುಪ ಹಾಗೂ ಪದ್ಮಶ್ರೀ ಭಟ್ ನಿಡ್ಡೋಡಿ  ತಿಳಿಸಿರುತ್ತಾರೆ. ಸಾಧಕ ಪತ್ರಕರ್ತರಾದ ಜಿತೇಂದ್ರ ಕುಂದೇಶ್ವರ, ಡಾ. ಶೇಖರ ಅಜೆಕಾರ್, ಹರೀಶ್. ಕೆ. ಆದೂರು, ವಾಮನ ಕರ್ಕೇರ, ಆರ್ ಸಿ ಭಟ್, ಧನಂಜಯ ಗುರುಪುರ,ಮಂದಾರ ರಾಜೇಶ್ ಭಟ್,ಡಾ. ರಶ್ಮಿ ಅಮ್ಮೆಂಬಳ, ವಾಮನ ಕರ್ಕೇರ, ಕಿರಣ ಮಂಜನಬೈಲ್  ಅವರುಗಳು ತನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಿದ್ದೇವೆ ಎಂದು ಸಂಘಟಕಧ್ವಯರು ತಿಳಿಸಿರುತ್ತಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸಾಣೂರು ಅರುಣ್ ಶೆಟ್ಟಿಗಾರ್ ಆಗಮಿಸಲಿದ್ದು, ಹಲವು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಗೌರವ ಸನ್ಮಾನ ಸಮಾರಂಭ ನಡೆಯಲಿದ್ದು, ನಂತರದಲ್ಲಿ ಆರದಿರಲಿ ಬದುಕು ಆರಾಧನಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 

ಯುಗಪುರುಷ ತನ್ನ 75 ವಸಂತಗಳನ್ನ ಪೂರೈಸಿದ ಸಂಭ್ರಮ ಮತ್ತೊಂದೆಡೆ ಆರದಿರಲಿ ಬದುಕು ಆರಾಧನಾ ತಂಡ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕರಾವಳಿ ಕರ್ನಾಟಕದ ಬಡ ಅನಾರೋಗ್ಯ ಪೀಡಿತ ಅಶಕ್ತರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿದೆ. ಈಗಾಗಲೇ ಆರದಿರಲಿ ಬದುಕು ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ 15 ಲಕ್ಷಕ್ಕಿಂತಲೂ ಹೆಚ್ಚು ಮೊತ್ತದ ಹಣವನ್ನು ತನ್ನ ಸದಸ್ಯರಿಂದಲೇ ಸಂಗ್ರಹಿಸಿ, (ಹೊರ ಜಗತ್ತಿನ ಯಾರ ಮುಂದೆಯೂ ಕೈಚಾಚದೆ ) ಅಗತ್ಯವುಳ್ಳ ಅನಾರೋಗ್ಯ ಪೀಡಿತರಿಗೆ ಶುಶ್ರೂಷೆಗಾಗಿ ಅಥವಾ ವೈದ್ಯಕೀಯ ವೆಚ್ಚಕ್ಕಾಗಿ ನೀಡಿದೆ, ಅಲ್ಲದೆ ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಆರದಿರಲಿ ಬದುಕು ತಂಡ ಮಕ್ಕಳಿಗಾಗಿ ಹೊಸ ಹೊಸ ಯೋಜನೆಗಳನ್ನ ರೂಪಿಸಿ ಅನುಷ್ಠಾನಗೊಳಿಸಿ,ಅದೆಷ್ಟೋ ಮಕ್ಕಳ ಪಾಲಿಗೆ ಸಾಂಸ್ಕೃತಿಕವಾಗಿ ಅದೃಷ್ಟದ ಬಾಗಿಲನ್ನು ತೆರೆದ ಮಾತೃ ಸಂಸ್ಥೆಯಾಗಿದೆ, ಅದೆಷ್ಟೋ ಮಕ್ಕಳ ಹೆತ್ತವರು  ಹರಸಿದ ಈ ಸಂಸ್ಥೆ , ಸಾವಿರಾರು ಸಂಕೆಯ ಸದಸ್ಯ ಬಲವನ್ನ ಹೊಂದಿದ್ದು, ಸುಮಾರು 500ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಕ್ರಿಯ ಸದಸ್ಯರನ್ನು ಹೊಂದಿರುವುದು ವಿಶೇಷವೇ ಸರಿ. 

ಇತ್ತೀಚಿನ ಸುದ್ದಿ

ಜಾಹೀರಾತು