ಇತ್ತೀಚಿನ ಸುದ್ದಿ
ಭಾರಿ ಮಳೆಗೆ ಗುಡ್ಡ ಕುಸಿತ: ಮಣ್ಣಿನಡಿಯಲ್ಲಿ ಸಿಲುಕಿದ ನಾಲ್ವರು; ಇಬ್ಬರ ರಕ್ಷಣೆ
07/07/2022, 10:01

ಬಂಟ್ವಾಳ( reporterkarnataka.com): ಗುಡ್ಡ ಕುಸಿದು ನಾಲ್ವರು ಕಾರ್ಮಿಕರು ಮಣ್ಣಿನಡಿ ಹೂತು ಹೋದ ಘಟನೆ ಬುಧವಾ ರಾತ್ರಿ ಬಂಟ್ವಾಳ ತಾಲೂಕಿನ ಪಂಜಿಕಲ್ಲಿನ ಮುಕ್ಕುಡ ಎಂಬಲ್ಲಿ ನಡೆದಿದೆ.
ಈ ಘಟನೆಯಲ್ಲಿ ರಬ್ಬರ್‌ಟ್ಯಾಪಿಂಗ್ ನ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದುದ್ದಾರೆ. ಅದರಲ್ಲಿ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಇಬ್ಬರ ರಕ್ಷಣಾ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.