7:39 PM Sunday16 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಜಿಲ್ಲಾ ಪೊಲೀಸ್‌ ಗ್ರೌಂಡ್‌ನಲ್ಲಿ ಕ್ರಿಮಿನಲ್ ಗಳ ಪರೇಡ್ : ‘ಯಾಕಪ್ಪ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ದೀಯಾ’ ಅಂತ ಪ್ರಶ್ನಿಸಿದ ಪೊಲೀಸ್ ಕಮಿಷನರ್

06/07/2022, 19:25

ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿರುವ ಕ್ರಿಮಿನಲ್‌ಗಳ ಪರೇಡ್‌ ಇಂದು ನಗರದ ಜಿಲ್ಲಾ ಪೊಲೀಸ್‌ ಗ್ರೌಂಡ್‌ನಲ್ಲಿ ನಡೆಯಿತು. 


275 ಕ್ರಿಮಿನಲ್‌ಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.ಇದರಲ್ಲಿ ರಾಜ್ಯಾದಾದ್ಯಂತ ಸುದ್ದಿ ಮಾಡಿದ್ದ ಡ್ರಗ್‌ ಪ್ರಕರಣದ ಆರೋಪಿ ಕಿಶೋರ್‌ ಅಮನ್‌ ಕಂಡು ಪೊಲೀಸ್‌ ಕಮೀಷನರ್‌ ಎನ್‌. ಶಶಿಕುಮಾರ್‌ ಶರ್ಟ್ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಹಾರ ಮತ್ತು ಎದೆಯ ಮೇಲಿದ್ದ ಟ್ಯಾಟೂ ನೊಡಿ ‘ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಿಶೋರ್ ಶೆಟ್ಟಿ, ತಾಯಿಯ ಟ್ಯಾಟೂ ಹಾಕಿರುವೆ ಎಂದಾಗ ‘ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ‌. ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಹೇಳಿದ ಅವರು ನೀನು ಡ್ರಗ್ಸ್‌ ತಿಂತೀಯಾ ಅಥವಾ ಬೇರೆಯವರಿಗೆ ತಿನ್ನಿಸೋದಷ್ಟೇನಾ ಎಂದು ಕ್ಲಾಸ್‌ ತೆಗೆದುಕೊಂಡರು. ಜೊತೆಗೆ ಕಳ್ಳತನ  ಪ್ರಕರಣದ ಆರೋಪಿಗಳ ಬಳಿ ಐಫೋನ್‌ಗಳನ್ನು ಕಂಡು ಹಾಗೂ ಗೋಕಳ್ಳತನ ಆರೋಪಿಗಳ ಪರ್ಸ್‌ನಲ್ಲಿದ್ದ ಸಾವಿರಾರು ರೂಪಾಯಿ ನೋಟು ನೋಡಿ ದಂಗಾದರು.

ಇತ್ತೀಚಿನ ಸುದ್ದಿ

ಜಾಹೀರಾತು