11:53 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಸುಳ್ಯ: ಬಿರುಕು ಬಿಟ್ಟ ಗುಳಿಕ್ಕಾನ ಜನವಸತಿ ಪ್ರದೇಶಕ್ಕೆ ತಜ್ಞರ ತಂಡ ಭೇಟಿ; ಪರಿಶೀಲನೆ

05/07/2022, 08:59

ಸಾಂದರ್ಭಿಕ ಚಿತ್ರ
ಸುಳ್ಯ(reporterkarnataka.com):
ಬಿರುಕು ಬಿಟ್ಟು ಜನರ ಆತಂಕಕ್ಕೆ ಕಾರಣವಾದ ಸುಳ್ಯದ ಗುಳಿಕ್ಕಾನ ಪ್ರದೇಶಕ್ಕೆ ತಜ್ಞರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

2018 ರಲ್ಲಿ ಗುಳಿಕ್ಕಾನದ ಗುಡ್ಡದಲ್ಲಿ 200 ಮೀಟರ್ ದೂರದವರೆಗೆ ಭೂಮಿ ಆಳವಾಗಿ ಭಾಗ ಬಿಟ್ಟಿತು. ಈ ವೇಳೆ ಗುಳಿಕ್ಕಾನದ ಗುಡ್ಡ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು.

ಇದೀಗ ಈ ಗುಡ್ಡ ಪ್ರದೇಶದಲ್ಲಿ ಜನ ವಾಸ ಮಾಡಲು ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದಕ್ಕೆ ತಂಡ ಆಗಮಿಸಿದೆ.

ಸುಳ್ಯದ ಗುಳಿಕ್ಕಾನ ಪ್ರದೇಶ ಜನ ವಾಸಿಸಲು ಯೊಗ್ಯವಾಗಿದೆಯೇ ಎಂದು ತಿಳಿಯಲು ಅಧ್ಯಯನ ತಂಡ ಆಗಮಿಸಿ ಪರಿಶೀಲನೆ ನಡೆಸಿ  ಅಧ್ಯಯನ ವರದಿ ಸರ್ಕಾರಕ್ಕೆ ಸಲ್ಲಿಸಲಿದೆ.

ಜಿಯಾಲಾಜಿಕಲ್ ಸರ್ವಿಸ್ ಆಫ್ ಇಂಡಿಯಾ ಮಿನಿಸ್ಟರಿ ಮೈನ್ಸ್ ಆಫ್ ಇಂಡಿಯಾದ ಹಿರಿಯ ಜಿಯಾಲಾಜಿಸ್ಟ್ ಅಫೀಸರ್ ಐಜಾದ್ ಅಹಮದ್ ಭಟ್, ಹಿರಿಯ ಜಿಯಾಲಾಜಿಸ್ಟ್ ಜಿ ಎಸ್ ಐ ಸೆಂಥಿಲ್ ಕುಮಾರ್ ಸುಕೋಚ್,  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಂಗಳೂರು ಉಪ ನಿರ್ದೇಶಕ ಲಿಂಗರಾಜ್ ಬಿ ಎಂ ಹಾಗೂ ಭೂ ವಿಜ್ಞಾನಿ ಶ್ರೀಮತಿ ಡಾ. ಸುಷ್ಮಾಶಶಿ ಇದ್ದರು. ಉಪ ತಹಶಿಲ್ದಾರ್ ಚಂದ್ರಕಾಂತ್ ಎಂ ಆರ್, ಆರ್ ಐ ಶಂಕರ್, ಕೊಲ್ಲಮೊಗ್ರು ಗ್ರಾ.ಪಂ ಪಿಡಿಒ ರವಿಚಂದ್ರ, ಕೊಲ್ಲಮೊಗ್ರು ಗ್ರಾಮ ಲೆಕ್ಕಾಧಿಕಾರಿ ಮಧು ಕೆ ಬಿ, ಸಹಾಯಕ ಯತಿನ್, ಗ್ರಾ.ಪಂ ಸಿಬ್ಬಂದಿ ಸಂತೋಷ್, ಸ್ಥಳೀಯ ಜನ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ಗುಡ್ಡ ಬಿರುಕು ಬಿಟ್ಟ ಹೊರತಾಗಿಯೂ ಅಲ್ಲಿ ಈಗಲೂ ಜನರು ವಾಸವಾಗಿದ್ದಾರೆ. ಸ್ಥಳಾಂತರಿಸಲು ಪ್ರಕ್ರಿಯೆ ಆರಂಭವಾಗಿ ನಾಲ್ಕು ವರ್ಷಗಳಾದರೂ ಈ ವರೆಗೆ ಸಾಧ್ಯವಾಗಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು