ಇತ್ತೀಚಿನ ಸುದ್ದಿ
ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾಫಿನಾಡಿನ ಭದ್ರಾ: ಕಳಸದ ಹೆಬ್ಬಾಳ ಸೇತುವೆ ಮುಳುಗಡೆ
04/07/2022, 13:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಕುದುರೆಮುಖ ಸುತ್ತಮುತ್ತ ಭಾನುವಾರ ರಾತ್ರಿಯಿಡಿ ಭಾರಿ ಮಳೆಯಾಗಿದ್ದು,ಕಳಸದ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ.
ಮಲೆನಾಡಿನಲ್ಲಿ ಭಾರೀ ಮಳೆಗೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ.
ಇದರ ಪರಿಣಾಮ ಕಳಸದ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ಕಳಸ- ಹೊರನಾಡು ದೇವಸ್ಥಾನ ಸಂಪರ್ಕ ಕಡಿದು ಹೋಗಿದೆ.
ಈ ವರ್ಷ ಮೊದಲ ಬಾರಿಗೆ ಮುಳುಗಿದ ಹೆಬ್ಬಾಳೆ ಸೇತುವೆ ಮುಖುಗಿದೆ. ಪ್ರತಿ ಮಳೆಗಾಲದಲ್ಲೂ ಹಲವು ಬಾರಿ ಮುಳುಗಡೆಯಾಗುತ್ತಿದೆ ಈ ಹೆಬ್ಬಾಳೆ ಸೇತುವೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಇದೆ.