ಇತ್ತೀಚಿನ ಸುದ್ದಿ
ಬೈಕ್ ಕಳ್ಳತನ ಮಾಡುತ್ತಿದ್ದ ಯುವ ಗ್ಯಾಂಗ್ ಪೊಲೀಸ್ ಬಲೆಗೆ: ಅಥಣಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
03/07/2022, 02:16
ರಾಹುಲ್ ಬೆಳಗಾವಿ
info.reporterkarnataka@gmail.com
ಹಲವು ದಿನಗಳಿಂದ ಅಥಣಿ ತಾಲೂಕಿನಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನಕ್ಕೆ ಅಥಣಿ ಪೊಲೀಸರು ಬ್ರೇಕ್ ಹಾಕಿದ್ದಾರೆ. 6ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ ಗ್ಯಾಂಗ್ ನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಪೋಲಿಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೋಲಿಸ್ ಅಧಿಕ್ಷಕ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಪಿಎಸ್ಐ ಕುಮಾರ ಹಾಡಕಾರ ಅವರ ನೇತೃತ್ವದಲ್ಲಿ ತಂಡ ಬಲೆ ಬೀಸಿ 3 ಮಂದಿ ಆರೋಪಿತರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸತ್ತಿ ಗ್ರಾಮದ ಆನಂದ ಗುಳಗಾವಿ (20), ಪವನ ಗಾಯಕವಾಡ (20) ಹಾಗೂ ಬರಮಖೋಡಿ ಗ್ರಾಮದ ವಿಕ್ರಮ ಸಾಳುಂಕೆ (20) ಎಂದು ತಿಳಿದು ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಡಿವೈಎಸ್ಪಿ ಎಸ್. ವಿ. ಗಿರೀಶ್ ಹಾಗೂ ಸಿಪಿಐ ಶಂಕರಗೌಡ ಬಸನಗೌಡ ಅವರ ಮಾರ್ಗದರ್ಶನದಂತೆ ಪಿಎಸ್ಐ ಕುಮಾರ ಹಾಡಕರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ರಚನೆ ಮಾಡಿ ಸತತ ಕಾರ್ಯಾಚಣೆ ನಡೆಸಿ ಮೋಟಾರ್ ಸೈಕಲ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.
ಈ ವೇಳೆ ವಿ ಜಿ ಆರೇರ, ಬಿ ಜೆ ತಳವಾರ, ಎ ಎ ಇರಕರ, ಜಿ ಎಚ್ ಹೊನವಾಡ, ಜಮೀರ ಡಾಂಗೆ, ಕೆ ಬಿ ಸಿರಗೂರ, ಆರ್ ಸಿ ಹಾದಿಮನಿ, ಎಮ್ ಎಮ್ ಖೋತ್ ಸೇರಿದಂತೆ ಇತರರು ತಂಡದಲ್ಲಿ ಭಾಗಿಯಾಗಿದ್ದರು.
ಪೊಲೀಸರ ಕಾರ್ಯಕ್ಕೆ ಜನ ಸಾಮಾನ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.