ಇತ್ತೀಚಿನ ಸುದ್ದಿ
ಮತ್ತೆ ಮತ್ತೆ ಭೂಕಂಪನ: ನಡುಗಿದ ಕಲ್ಲುಗುಂಡಿ, ಸಂಪಾಜೆ; ಭಯಬೇಡ, ಪಶ್ಚಾತ್ ಕಂಪನ ಅಷ್ಟೇ
02/07/2022, 09:54
ಮಡಿಕೇರಿ(reporterkarnataka.com):
ಕೊಡಗು ಹಾಗೂ ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದೆ. ಇಂದು ಮುಂಜಾನೆ ಭೂಮಿ ನಡುಗಿದೆ ಎಂಬ ಮಾಹಿತಿ ಇದೆ. ಭೂಕಂಪನದ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದೆ. ಕಲ್ಲುಗುಂಡಿ , ಸಂಪಾಜೆ ಭಾಗಗಳಲ್ಲಿ ಭೂಮಿ ನಡುಗಿದೆ ಎನ್ನಲಾಗಿದೆ.
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಸಂದೇಶಗಳಿಂದ ಜನರು ಭಯಪಡಬಾರದು. ಒಮ್ಮೆ ಕಂಪನವಾದಲ್ಲಿ ಅದರ ಪರಿಣಾಮ ಕೆಲವು ದಿನಗಳವರೆಗೆ ಇರುತ್ತದೆ. ಭೂಮಿಯ ಕೆಳಭಾಗದಲ್ಲಿ ನಡೆಯುತ್ತಿರುವ ನೈಸರ್ಗಿಕ ವಿದ್ಯಮಾನಗಳ ಪರಿಣಾಮ ಸಣ್ಣನೆಯ ಕಂಪನಗಳು ಸಂಭವಿಸಬಹುದು.
ಭೂಸ್ತರಭಂಗದಿಂದ ಕೆಲವು ದಿನ ಈ ನಡುಕ, ಕಂಪನಗಳು ನಡೆಯುವ ಸಾಧ್ಯತೆ ಇದ್ದು ಜನ ಆತಂಕಪಡಬೇಕಿಲ್ಲ ಎಂದು ಭೂಗರ್ಭ ತಜ್ಞರು ತಿಳಿಸಿದ್ದಾರೆ.