ಇತ್ತೀಚಿನ ಸುದ್ದಿ
ಕನ್ನಯ್ಯ ಲಾಲ್ ಸಾವಿಗೆ ರಾಜಸ್ಥಾನ ಸರಕಾರವೇ ನೇರ ಹೊಣೆ, ಆರೋಪಿಗಳ ಗಲ್ಲಿಗೇರಿಸಿ: ಶಾಸಕ ವೇದ್ಯಾಸ ಕಾಮತ್
01/07/2022, 19:46
ಮಂಗಳೂರು(reporterkarnataka.com): ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಮತಾಂಧ ಮನೋಭಾವ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಇಂತಹ ಭಯೋತ್ಪಾದಕ ಕೃತ್ಯಗಳನ್ನು ರಾಜಕೀಯ ದೃಷ್ಟಿಯಿಂದ ಖಂಡಿಸದಿರುವ ನಾಯಕರ ಓಲೈಕೆಯ ರಾಜಕಾರಣದಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ ಎಂದು ಹೇಳಿದ್ದಾರೆ.
ಕನ್ನಯ್ಯ ಲಾಲ್ ಸಾವಿಗೆ ರಾಜಸ್ಥಾನ ಸರಕಾರವೇ ನೇರ ಕಾರಣ. ಜೀವ ಬೆದರಿಕೆಯಿರುವ ಬಗ್ಗೆ ಕನ್ನಯ್ಯ ಲಾಲ್ ದೂರು ನೀಡಿದ್ದರೂ ಸೂಕ್ತ ಭದ್ರತೆ ಕಲ್ಪಿಸದ ರಾಜಸ್ಥಾನ ಸರಕಾರ ಘಟನೆಗೆ ನೇರ ಹೊಣೆಯಾಗಿದೆ. ಹಿಂದುಗಳ ಜೀವವನ್ನು ತೃಣದಂತೆ ಕಾಣುವ ಕಾಂಗ್ರೇಸ್ ನಾಯಕರು ಈ ಘಟನೆಗೆ ಜವಾಬ್ದಾರರು ಎಂದು ಶಾಸಕ ಕಾಮತ್ ಹೇಳಿದ್ದಾರೆ.