ಇತ್ತೀಚಿನ ಸುದ್ದಿ
ಅಪಾಯವನ್ನು ಲೆಕ್ಕಿಸದೇ ಟ್ರಾಕ್ಟರ್ ಹಗ್ಗ ಜಗ್ಗಾಟ ಆಟ ಆಯೋಜನೆ: ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ?
01/07/2022, 11:56
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಅಪಾಯವನ್ನು ಕಣ್ಮುಂದೆ ಇಟ್ಟುಕೊಂಡು ಅಪಾಯಕಾರಿ ಟ್ರ್ಯಾಕ್ಟರ್ ಹಗ್ಗ ಜಗ್ಗಾಟ ಆಟ ಆಯೋಜಿಸಲಾಯಿತು. ಗ್ರಾಮದ ಬೀರಲಿಂಗೇಶ್ವರ ಜಾತ್ರೆಯ ಕಾರ್ಯಕ್ರಮವಾಗಿ ಆಟ ಆಯೋಜನೆ ಮಾಡಲಾಗಿತ್ತು.
ಅಥಣಿ ಚಮಕೇರಿ ರೋಡ್ ಮೇಲೆ ಆಯೋಜಕರಿಂದ ಟ್ರ್ಯಾಕ್ಟರ್ಗಳ ರೇಸ್ ನಡೆಯಿತು.
ಅಪಾಯಕಾರಿ ಟ್ರ್ಯಾಕ್ಟರ್ ರೇಸ್ ನಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಆಟ ಆಯೋಜಿಸಲಾಯಿತು.