ಇತ್ತೀಚಿನ ಸುದ್ದಿ
ಮೂಡಿಗೆರೆ: ಕಾಡಾನೆ ದಾಳಿ; ಎಂಎಸ್ಐಎಲ್ ನೌಕರ ಕೂದಲೆಳೆ ಅಂತರದಲ್ಲಿ ಪಾರು
30/06/2022, 23:12
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಊರು ಬಗೆ ಸಮೀಪ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಎಂಎಸ್ಐಎಲ್ ನೌಕರ ಪಾರಾದ ಘಟನೆ ಗುರುವಾರ ನಡೆದಿದೆ.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಎಂಎಸ್ಐಎಲ್ ನೌಕರ ಪ್ರಭಾಕರ್ ಮೇಲೆ ಕಾಡಾನೆ ದಾಳಿ ನಡೆಸಿತ್ತು.
ಪ್ರಭಾಕರ್ ಅವರ ಬೈಕನ್ನು ಕಾಡಾನೆ ಜಖಂಗೊಳಿಸಿದೆ. ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಗೆ ರೈತಾಪಿ ವರ್ಗ ಹೈರಾಣಾಗಿದ್ದಾರೆ.
ಪ್ರಭಾಕರ ಅವರಿಗೆ ಸತ್ತಿಗೆ ನಹಳ್ಳಿ ಪ್ರಾಥಮಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.