10:55 PM Sunday16 - June 2024
ಬ್ರೇಕಿಂಗ್ ನ್ಯೂಸ್
ಮಂಗಳೂರು ವಿವಿ 42ನೇ ಘಟಿಕೋತ್ಸವ: 155 ಮಂದಿಗೆ ಪಿಎಚ್.ಡಿ; ಮೂವರು ಉದ್ಯಮಿಗಳಿಗೆ ಗೌರವ… ಮುಖ್ಯಮಂತ್ರಿಗಳು ಭಂಡತನ ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ಕೂಡಲೇ ಹಿಂಪಡೆಯಲಿ: ಬಿಜೆಪಿ… ನೀಟ್ ಬದಲು ರಾಜ್ಯಗಳೇ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ಅವಕಾಶ ನೀಡಲಿ:… ರಷ್ಯಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾಗಶಃ ಮುಳುಗಿದ ಮಾಸ್ಕೋ ನಗರ ಯಡಿಯೂರಪ್ಪ ಕೇಸಿಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು?: ಸಿ.ಟಿ.ರವಿ ಪ್ರಶ್ನೆ ಉಳ್ಳಾಲ ಕುಡಿಯುವ ನೀರಿನ ಮೊದಲ ಹಂತದ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮನ: ಸ್ಪೀಕರ್… ಪ್ರಧಾನಿ ಮೋದಿ ಇಟಲಿಗೆ: 14ರಂದು ಜಿ7 ಶೃಂಗಸಭೆಯಲ್ಲಿ ಭಾಗಿ ಉಡುಪಿ ಜಿಲ್ಲೆಯಲ್ಲೂ ಕಾಡಾನೆ ಕಾಟ ಶುರು: ಹೆಬ್ರಿ, ಸೋಮೇಶ್ವರ ಪ್ರದೇಶದಲ್ಲಿ ಒಂಟಿ ಸಲಗದ… ಅಜ್ಜಿಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಶಿಥಿಲವಾದ ಕಂಪೌಂಡ್ ಭಾಗಶಃ ಕುಸಿತ; ವಾಲಿಕೊಂಡ ಗೇಟ್:… ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿ ಆಡಳಿತ ನಡೆಸುತ್ತಿದೆ: ಮಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

40% ಕಮಿಷನ್ ಆರೋಪ: ಪ್ರಧಾನಿ ಕಾರ್ಯಾಲಯದಿಂದ ಕರೆ?; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ; ಭ್ರಷ್ಟರಲ್ಲಿ ಎಲ್ಲಿಲ್ಲದ ನಡುಕ.!

29/06/2022, 20:23

ಬೆಂಗಳೂರು(reporterkarnataka.com): ಪ್ರಧಾನಿ ಕಾರ್ಯಾಲಯದಿಂದ(ಪಿಎಂಒ)ಬಂದಿದೆ ಎನ್ನಲಾದ ಕರೆಯೊಂದು ದೂರದ ಬೆಂಗಳೂರಿನಲ್ಲಿ ಭಾರೀ ಕಂಪನ ಉಂಟು ಮಾಡಿದೆ. 40% ಕಮಿಷನ್ ಕುರಿತು ಗುತ್ತಿಗೆದಾರರು ಮಾಡಿರುವ ಆರೋಪದ ಬಗ್ಗೆ ಇದೀಗ  ಪ್ರಧಾನಿ ಕಾರ್ಯಾಲಯ ಕಾರ್ಯೋನ್ಮುಖವಾಗಿದೆ. ಈ ನಡುವೆ ಭ್ರಷ್ಟರಲ್ಲಿ ನಡುಕ ಉಂಟು ಮಾಡಿದೆ.

40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವಾಗಲೇ ಈ ಕರೆ ಆಡಳಿತ ಪಕ್ಷದ ಬಿಜೆಪಿಯಲ್ಲಿ ಭಾರೀ ತಲ್ಲಣವನ್ನುಂಟು ಮಾಡಿದೆ. ಭ್ರಷ್ಟ ಸಚಿವರು, ಶಾಸಕರುಗಳಿಗೆ ನಿದ್ದೆ ಇಲ್ಲದ ರಾತ್ರಿಯನ್ನು ಇದು ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜಕೀಯ ವೀಕ್ಷಕರು ಲೆಕ್ಕ ಹಾಕುತ್ತಾರೆ.

ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ 

ಅವರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದೆ ಎಂಬ ಮಾಹಿತಿ ಇದೆ. ದೂರುದಾರರ ಮಾಹಿತಿ ನೀಡುವಂತೆ ಪಿಎಂಒದಿಂದ ಕೋರಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಕಾರ್ಯಾಲಯದಿಂದ ಬಂದ ಕರೆಯಲ್ಲಿ

“ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಭ್ರಷ್ಟಾಚಾರದ ದಾಖಲೆ ನೀಡುವಂತೆ” ಸೂಚಿಸಲಾಯಿತು ಎನ್ನಲಾಗಿದೆ.

ವಿಶೇಷವೆಂದರೆ ಮೋದಿ ಬೆಂಗಳೂರಿಗೆ ಬರುವ ಮುನ್ನ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ವರದಿ ತರಿಸಿಕೊಂಡಿತ್ತು. ಈ ಬಗ್ಗೆನೂ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತನಿಖೆಗೆ ಗೃಹ ಇಲಾಖೆಯ ತಂಡ ಬೆಂಗಳೂರಿಗೆ ಬರೋ ಸಾಧ್ಯತೆ ಇದೆ. ಗುತ್ತಿಗೆದಾರರ‌ ಸಂಘವೂ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡಿತ್ತು. ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಪ್ರಧಾನಿ ಕಾರ್ಯಾಲಯ ಸೂಚಿಸಿದೆ ಎಂದು ಹೇಳಲಾಗಿದ್ದು, ಕೆಂಪಣ್ಣ ಅವರು ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಎಂ ಒದಿಂದ ಬಂದಿದೆ ಎನ್ನಲಾದ  ಕರೆ ಕುರಿತು 

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ.

ಯಾರೋ ನಿಮ್ಮನ್ನ ಕೇಳಿಕೊಂಡು ಬಂದಿದ್ದಾರೆ. ನಿಮ್ಮ‌ಜೊತೆ ಮಾತನಾಡಬೇಕೆಂದು ಕೇಳ್ತಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರು. ನಾನು‌ ಅವರನ್ನ ಯಾರೆಂದು ವಿಚಾರಿಸಿದೆ.

ಹೋಂ ಡಿಪಾರ್ಟಮೆಂಟ್ ನಿಂದ ಬಂದಿದ್ದೇವೆ ಎಂದು ಹೇಳಿದರು. ನಿಮ್ಮನ್ನ ಭೇಟಿಯಾಗಬೇಕು ಅಂತ ಹೇಳಿದ್ರು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಈ ಹಿಂದೆ ರಾಜ್ಯ ಸರಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡಿ ದೂರು ನೀಡಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು