12:25 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಉಳ್ಳಾಲ ಅಬ್ಬಕ್ಕನ ಪ್ರತಿಮೆಯಿಂದ ಉಳ್ಳಾಲ ಬೈಲ್ ವರೆಗೆ ಗಿಡ ನಾಟಿ ಕಾರ್ಯಕ್ರಮ: ಶಾಸಕ ಯು.ಟಿ. ಖಾದರ್ ಚಾಲನೆ 

27/06/2022, 22:00

ಉಳ್ಳಾಲ(reporterkarnataka.com):
ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ವತಿಯಿಂದ ಅಬ್ಬಕ್ಕ ಸಾಲುಮರ ಯೋಜನೆಯ ಅಂಗವಾಗಿ ಮಂಗಳೂರು  ವಲಯ ಅರಣ್ಯ ಇಲಾಖೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರ ಸಹಕಾರದೊಂದಿಗೆ ಉಳ್ಳಾಲ ಅಬ್ಬಕ್ಕನ ಪ್ರತಿಮೆಯಿಂದ ಉಳ್ಳಾಲ ಬೈಲ್ ವರೆಗೆ ಗಿಡ ನಾಟಿ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮಕ್ಕೆ ಶಾಸಕ ಯು. ಟಿ. ಖಾದರ್  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರಸಕ್ತ  ವಿದ್ಯಮಾನದಲ್ಲಿ ಪರಿಸರ ಸಂರಕ್ಷಣೆ ಹಾಗೂ ಗಿಡಗಳನ್ನು ಬೆಳೆಸುವುದು ಅಗತ್ಯ. ಉಳ್ಳಾಲದ ಉದ್ದಕ್ಕೂ ಸಾಲು  ಮರಗಳನ್ನು ಬೆಳೆಸುವ ಮೂಲಕ ಸ್ವಚ್ಛ ಪರಿಸರಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಗುರು ಬೆಳದಿಂಗಳು ಸಂಸ್ಥೆ ಈಗಾಗಲೇ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು ಇನ್ನಷ್ಟು ಸೌಹಾರ್ದಯುತ ಕಾರ್ಯಕ್ರಮ ನಡೆಸಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್.ವಹಿಸಿದ್ದರು.


ವಲಯ ಅರಣ್ಯ ಇಲಾಖಾ ಅಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯಾ, ಉಳ್ಳಾಲ ನಗರಸಭೆ ಪೌರಾಯುಕ್ತ ವಿದ್ಯಾ, ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉದ್ಯಮಿಗಳಾದ ಧರ್ಮರಾಜ್ ಅಮ್ಮುಂಜೆ, ಸತೀಶ್ ಕುಮಾರ್ ಬಜಾಲ್, ಯುವವಾಹಿನಿ ಕೊಲ್ಯ ಘಟಕ ಅಧ್ಯಕ್ಷ ಮೋಹನ್ ಮಾಡೂರು, ಕಣಚೂರು ಮೆಡಿಕಲ್ ಕಾಲೇಜು ಲೆಕ್ಕಪರಿಶೋಧಕ ಯು.ಎ.ಪ್ರೇಮನಾಥ್, ಸಾಮಾಜಿಕ ಕಾರ್ಯಕರ್ತ ಉದಯ ಆರ್.ಕೆ, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಮನೋಜ್ ಸಾಲ್ಯಾನ್, ಹೈಕೋರ್ಟ್ ವಕೀಲೆ ರಾಜಲಕ್ಷ್ಮೀ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಪೂಜಾರಿ, ಮಂಗಳೂರು ವಿಶ್ವವಿದ್ಯಾಲಯ ನಾರಾಯಣಗುರು ಅಧ್ಯಯನ ಪೀಠ ಸದಸ್ಯೆ ನಮಿತಾ ಶ್ಯಾಮ್, ಬಿಲ್ಲವ ಸಂಘ ಬಂಡಿಕೊಟ್ಯ ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಮಮತಾ, ಕೊಲ್ಯ ಬಿಲ್ಲವ ಸಂಘದ ಟ್ರಸ್ಟ್ ಅಧ್ಯಕ್ಷ ವೇಣುಗೊಪಾಲ್, ಕಾರ್ಯದರ್ಶಿ ಭಾಸ್ಕರ್ ಮಡ್ಯಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಉಳ್ಳಾಲ ಘಟಕ ಯೋಜನಾಧಿಕಾರಿ ಜಯಂತಿ,ಲೋಹಿತ್, ವಿವಿಧ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.


ಕುಸುಮಾಕರ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಗುರು ಬೆಳದಿಂಗಳು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು