10:08 PM Friday29 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ

ಇತ್ತೀಚಿನ ಸುದ್ದಿ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಗರಿಕರ ಎಲ್ಲ ಹಕ್ಕು ಕಸಿಯಲಾಯಿತು: ‘ಮನ್ ಕಿ ಬಾತ್’ನಲ್ಲಿ  ಪ್ರಧಾನಿ ಮೋದಿ

27/06/2022, 00:09

ಹೊಸದಿಲ್ಲಿ(reporterkarnataka.com): ದೇಶದ ಮೇಲೆ 1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಹತ್ತಿಕ್ಕುವ 

ಪ್ರಯತ್ನ ನಡೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದ ಇತಿಹಾಸದ ಕರಾಳ ಅಧ್ಯಾಯವಾದ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಾಸಿಕ ಮನ್ ಕಿ ಬಾತ್ ಭಾಷಣವನ್ನು ಪ್ರಾರಂಭಿಸಿದರು. ತುರ್ತುಪರಿಸ್ಥಿತಿಯನ್ನ ವಿರೋಧಿಸಿದ ಎಲ್ಲರನ್ನೂ ಶ್ಲಾಘಿಸಿದ ಪ್ರಧಾನಿ, ನಮ್ಮ ಪ್ರಜಾಸತ್ತಾತ್ಮಕ ಮನಸ್ಥಿತಿಯೇ ಅಂತಿಮವಾಗಿ ಮೇಲುಗೈ ಸಾಧಿಸಿತು ಎಂದರು.

ತಮ್ಮ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ ಅಂದಿನ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯನ್ನ ನೆನಪಿಸಿಕೊಂಡ ಮೋದಿ, ಆ ಸಮಯದಲ್ಲಿ ಎಲ್ಲಾ ಹಕ್ಕುಗಳನ್ನ ಕಸಿದುಕೊಳ್ಳಲಾಯಿತು ಎಂದು ಹೇಳಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಮತ್ತು 1977ರ ಮಾರ್ಚ್ 21ರಂದು ಅದನ್ನು ತೆಗೆದುಹಾಕಲಾಯಿತು.

‘ಇಂದು, ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನ ಆಚರಿಸುತ್ತಿರುವಾಗ, ತುರ್ತು ಪರಿಸ್ಥಿತಿಯ ಕರಾಳ ಅವಧಿಯನ್ನು ನಾವು ಮರೆಯಬಾರದು. ಅಮೃತ ಮಹೋತ್ಸವವು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯದ ಕಥೆಗಳನ್ನ ಹೇಳುವುದಲ್ಲದೇ ಸ್ವಾತಂತ್ರ್ಯದ 75 ವರ್ಷಗಳ ಪ್ರಯಾಣವನ್ನ ಸಹ ನಮಗೆ ತಿಳಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ನಾನು ದೇಶದ ಯುವಕರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ, ನಿಮ್ಮ ಹೆತ್ತವರು ಒಮ್ಮೆ ನಿಮ್ಮ ವಯಸ್ಸಿನವರಾಗಿದ್ದಾಗ, ಅವರ ಬದುಕುವ ಹಕ್ಕನ್ನ ಸಹ ಕಸಿದುಕೊಳ್ಳಲಾಯಿತು ಎಂದು ನಿಮಗೆ ತಿಳಿದಿದೆಯೇ? ತುರ್ತು ಪರಿಸ್ಥಿತಿ ಹೇರಿದ 1975ರ ಜೂನ್ ತಿಂಗಳಲ್ಲಿ ಇದು ಸಂಭವಿಸಿತ್ತು’ ಎಂದು ಪ್ರಧಾನಿ ಹೇಳಿದರು.

‘ಆ ಅವಧಿಯಲ್ಲಿ, ನಾಗರಿಕರ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಈ ಹಕ್ಕುಗಳಲ್ಲಿ ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಲಾದ ನಾಗರಿಕರಿಗೆ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವೂ ಒಂದು. ಆ ಸಮಯದಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು’ ಎಂದು ಅವರು ಹೇಳಿದರು.

‘ದೇಶದ ನ್ಯಾಯಾಲಯಗಳು, ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆ, ಪತ್ರಿಕೆಗಳು ಎಲ್ಲವನ್ನೂ ನಿಯಂತ್ರಣಕ್ಕೆ ತಂದವು. ಸೆನ್ಸಾರ್ಶಿಪ್ ಎಷ್ಟು ಕಟ್ಟುನಿಟ್ಟಾಗಿತ್ತೆಂದರೆ, ಅನುಮತಿಯಿಲ್ಲದೆ ಏನನ್ನೂ ಪ್ರಕಟಿಸಲು ಸಾಧ್ಯವಿಲ್ಲ’ ಎಂದು ಪ್ರಧಾನಿ ಹೇಳಿದರು.

‘ನನಗೆ ನೆನಪಿದೆ, ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರು ಸರ್ಕಾರವನ್ನ ಹೊಗಳಲು ನಿರಾಕರಿಸಿದಾಗ, ಅವರನ್ನ ನಿಷೇಧಿಸಲಾಯಿತು. ರೇಡಿಯೋದಲ್ಲಿ ಅವರಿಗೆ ಅವಕಾಶ ನೀಡಲಿಲ್ಲ’ ಎಂದು ಪ್ರಧಾನಿ ಹೇಳಿದರು. ಹಲವಾರು ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಾಂತರ ಜನರ ಮೇಲಿನ ದೌರ್ಜನ್ಯಗಳ ಹೊರತಾಗಿಯೂ, ಪ್ರಜಾಪ್ರಭುತ್ವದಲ್ಲಿ ಭಾರತೀಯರ ನಂಬಿಕೆಯನ್ನ ಅಲುಗಾಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರತಿಪಾದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು