10:14 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಶಿವಮೊಗ್ಗ: ಡ್ರಗ್ಸ್  ಜಾಗೃತಿಗಾಗಿ 15 ಕಿಮೀ ಓಡಿದ  ಹೈಕೋರ್ಟ್ ನ್ಯಾಯವಾದಿ ಮೋಹನ್ ಕುಮಾರ್ ದಾನಪ್ಪ

26/06/2022, 21:48

ಶಿವಮೊಗ್ಗ(reporterkarnataka.com): ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಡ್ರಗ್ಸ್ ಜಾಗೃತಿ ಕುರಿತು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಸರಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪ ಅವರು ಶಿವಮೊಗ್ಗ ನಗರದಲ್ಲಿ 15 ಕಿಲೋ ಮೀಟರ್ ಮ್ಯಾರಥಾನ್ ಮಾಡಿದರು.


ವಿನೋಬಾ ನಗರ ಪೊಲೀಸ್ ಚೌಕಿಯಿಂದ- ಉಷಾ ನರ್ಸಿಂಗ್ ಹೋಂ- ನೆಹರೂ ಕ್ರೀಡಾಂಗಣ- ಮಹಾವೀರ ವೃತ್ತ- ಕೆಇಬಿ ವೃತ್ತ-ಸಂಗೊಳ್ಳಿ ರಾಯಣ್ಣ ವೃತ್ತ- ಶಂಕರ್ ಮಠ ವೃತ್ತ- ಬಿ ಹೆಚ್ ರಸ್ತೆ- ಶಿವಪ್ಪ ವೃತ್ತ- ಅಮೀರ್ ಅಮ ವೃತ್ತ- ಕೆ ಎಸ್ ಆರ್ ಟಿಸಿ ಬಸ್ ಸ್ಟಾಂಡ್- ಎಸ್ಪಿ ಕಚೇರಿ- ಮೆಗ್ಗಾನ್ ಆಸ್ಪತ್ರೆ- ಮಾನಸ ನರ್ಸಿಂಗ್ ಹೋಂ- ಜೈಲ್ ರೋಡ್- ಗೋಪಿ ವೃತ್ತ- ಗಾಂಧಿ ಪಾರ್ಕ್-ಎಪಿಎಂಸಿ- ಅಲ್ಕೊಳ ವೃತ್ತ- ಕಾಶೀಪುರವರೆಗೂ ಮ್ಯಾರಥಾನ್ ನಡೆಸಿದರು ನಂತರ “ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ, ಆರೋಗ್ಯಕ್ಕೆ ಮಾರಕ ದೇಶವನ್ನೇ ಡ್ರಗ್ಸ್ ನಿಂದ ನಿರ್ಮೂಲನೆ ಮಾಡಬೇಕೆಂದು ಹೇಳುವುದಕ್ಕಿಂತ ತಮ್ಮ ತಮ್ಮ ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸುವಂತೆ” ಕರೆ ನೀಡಿದರು, 

ಜಾಗೃತಿ ಓಟದ ಸಂಪೂರ್ಣ ಯಶಸ್ಸನ್ನು ಸುಪ್ರೀಂ ಕೋರ್ಟಿನ ಎಎಸ್ಜಿ ಕೆ.ಎಂ.ನಟರಾಜ್ ಅವರಿಗೆ ಸಮರ್ಪಿಸಿದರು!

ಇತ್ತೀಚಿನ ಸುದ್ದಿ

ಜಾಹೀರಾತು