9:26 AM Wednesday11 - February 2026
ಬ್ರೇಕಿಂಗ್ ನ್ಯೂಸ್
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಇತ್ತೀಚಿನ ಸುದ್ದಿ

ಎಸ್ ಸಿಐ ವತಿಯಿಂದ ರಾಜಾರಾಮ ಶೆಟ್ಟಿ ಅವರ ಗಟ್ಟಿದ ಬೀಡು ಎಸ್ಟೇಟ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

08/06/2022, 08:46

ಮಂಗಳೂರು(reporterkarnataka.com):  ಸೀನಿಯರ್  ಚೇಂಬರ್ ಇಂಟರ್‌ನ್ಯಾಶನಲ್ ಮಂಗಳೂರು ಲೀಜನ್ ವತಿಯಿಂದ ನಗರದ ಕಾವೂರು ಅಂಬಿಕಾ ನಗರದ ರಾಜಾರಾಮ ಶೆಟ್ಟಿ ಅವರ ಗಟ್ಟಿದ ಬೀಡು ಎಸ್ಟೇಟ್‌ನಲ್ಲಿ ಭಾನುವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 

ಕಾರ್ಯಕ್ರಮವನ್ನು ರಾಜಾರಾಮ ಶೆಟ್ಟಿಯವರ ತಂದೆ 97ರ ಹರೆಯದ ಕೆ. ಕೆ.ಶೆಟ್ಟಿ ಅವರು ಗಿಡವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸಂಯೋಜಕ ಜಿ ಮತ್ತು ಡಿ ಕರ್ನಾಟಕ, ಜಿ ಕೆ ಹರಿಪ್ರಸಾದ್ ರೈ ಉಪಸ್ಥಿತಿಯಲ್ಲಿ ಎಸ್‌ಸಿಐ ಮಂಗಳೂರು ಲೀಜನ್ ಅಧ್ಯಕ್ಷ ಎಸ್.ಎನ್.ಕಿಶೋರ್ ಫೆರ್ನಾಂಡಿಸ್ ಅವರಿಗೆ  ಗಿಡವನ್ನು ಹಸ್ತಾಂತರಿಸಲಾಯಿತು. ಅವರು ಪ್ರಕೃತಿಯ ಮಹತ್ವವನ್ನು ವಿವರಿಸಿದರು ಮತ್ತು ಭೂಮಿ ತಾಯಿಯನ್ನು ಉಳಿಸಲು ಸದಸ್ಯರಿಗೆ ಕರೆ ನೀಡಿದರು. 


ಈ ಸಂದರ್ಭದಲ್ಲಿ ವಿವಿಧ ತಳಿಯ 50 ಗಿಡಗಳನ್ನು ನೆಡಲಾಯಿತು. ಲೀಜನ್ ಐಪಿಪಿ, ಎಸ್ ಎನ್ ಆರ್ ಜಿ ಕೆ ಹರಿಪ್ರಸಾದ್ ರೈ, ಅಧ್ಯಕ್ಷ ಕಿಶೋರ್ ಫೆರ್ನಾಂಡಿಸ್ , ಕಾರ್ಯದರ್ಶಿ ಎಸ್ ಎನ್ ಆರ್ ಫ್ಲಾವಿ ಡಿಮೆಲ್ಲೊ, ಜಂಟಿ ಕಾರ್ಯದರ್ಶಿ ಹಾಗೂ ಪಿ ಆರ್ ಓ ಲತಾ ಕಲ್ಲಡ್ಕ, ಸದಸ್ಯರಾದ ಎಸ್. ಎನ್. ಆರ್. ದತ್ತಾತ್ರೇಯ, ರಾಜಾರಾಂ ಶೆಟ್ಟಿ ಹಾಗೂ ಇತರ ಸದಸ್ಯರು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು