1:26 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಚಡ್ಡಿ ಸುಡೋದ್ರಿಂದ ನಮ್ಮ ವಿಚಾರಧಾರೆಯನ್ನ ಸುಡಲು ಆಗಲ್ಲ: ಕಾಂಗ್ರೆಸ್ ಗೆ ಕುಡಚಿ ಶಾಸಕ ಪಿ.ರಾಜೀವ್ ತಿರುಗೇಟು

06/06/2022, 21:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಂಗ್ರೆಸ್ ಈ ನೆಲದ ವಿಚಾರಧಾರೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದೆ. ಚಡ್ಡಿ ಸುಡೋದ್ರಿಂದ ನಮ್ಮ ವಿಚಾರಧಾರೆಯನ್ನ ಸುಡಲು ಆಗಲ್ಲ ಎಂದು ಕುಡಚಿ ಶಾಸಕ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸೋಮವಾರ ಮಾಧ್ಯಮ ಜತೆ ಮಾತನಾಡಿದ ಅವರು, ಕಾಂಗ್ರೆಸಿಗರು ಚಡ್ಡಿಗೆ ಬೆಂಕಿ ಹಾಕ್ತಿಲ್ಲ, ಜನರ ಮನಸ್ಸು, ಹೃದಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಅವರ ನೈತಿಕತೆ, ಚಿಂತನೆ ಏನೆಂದು ತೋರಿಸುತ್ತಿದೆ ಎಂದರು.

ಕಾಂಗ್ರೆಸ್ ಮನಸ್ಥಿತಿ ಎಷ್ಟು ವಿಕೃತ ಎಂಬುದನ್ನು ಇದು ತೋರಿಸುತ್ತೆ. ಆರ್.ಎಸ್.ಎಸ್. ದೇಶಾಭಿಮಾನ, ರಾಷ್ಟ್ರೀಯತೆ  ಭಾವನೆಯ ಹೃದಯ ಕಟ್ಟುವ ಕೆಲಸ ಮಾಡಿದೆ. ದೂರದಲ್ಲಿ ನಿಂತು ಏನೋ ಮಾತನಾಡೋದಲ್ಲ, ಹತ್ತಿರದಿಂದ ಬಂದು ನೋಡಿ ಎಂದು ಅವರು ಸಲಹೆ ನೀಡಿದರು.

1963ರಲ್ಲಿ ನೆಹರೂ ರಾಜ್ ಪಥ್ ನಲ್ಲಿ ಆರ್.ಎಸ್.ಎಸ್.ಇರಬೇಕು ಎಂದಿದ್ದರು. ಇಂಡಿಯಾ-ಪಾಕಿಸ್ತಾನ ವಿಭಜನೆಯಾದಾಗ ನಿಂತವರು ಸ್ವಯಂ ಸೇವಕರು.ಭಾರತ-ಚೀನಾ ಯುದ್ಧವಾದಾಗ ಯುದ್ಧಭೂಮಿಯಲ್ಲಿ ಸೇವೆ ಮಾಡಿದವರು ಸ್ವಯಂ ಸೇವಕರು ಎಂದವರು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು