ಇತ್ತೀಚಿನ ಸುದ್ದಿ
ಅರಬ್ಬೀ ಸಮುದ್ರದಲ್ಲಿ ಮುಳುಗಿದ ಸ್ಥಿತಿಯಲ್ಲಿ ನಿಗೂಢ ದ್ವೀಪ ಪತ್ತೆ: 8 ಕಿ.ಮೀ ಉದ್ದ, 3.5 ಕಿ.ಮೀ ಅಗಲವಿದೆಯಂತೆ!!
18/06/2021, 07:18
ತಿರುವನಂತಪುರ(reporterkarnataka news):
ಸಮುದ್ರದೊಳಗೆ ಒಂದು ನಿಗೂಢ ದ್ವೀಪ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೂಗಲ್ ನಕ್ಷೆ ಇದನ್ನು ಬಹಿರಂಗಪಡಿಸಿದೆ.
ಕೇರಳದ ಕೊಚ್ಚಿ ಸಮೀಪ ಅರಬಿ ಸಮುದ್ರದಲ್ಲಿ ಹ ‘ನೀರೊಳಗಿನ ದ್ವೀಪ’ ಪತ್ತೆಯಾಗಿದ್ದು, ಹುರುಳಿ ಬೀಜದ ಆಕಾರದಲ್ಲಿದೆ. ಭೂಗರ್ಭ ಶಾಸ್ತ್ರಜ್ಞರಿಗೆ ಇದು ಕುತೂಹಲ ಹುಟ್ಟಿಸಿದೆ.
ಉಪಗ್ರಹ ಚಿತ್ರವನ್ನು ಮೊದಲು ಚೆಲ್ಲಾನಮ್ ಕಾರ್ಶಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ಗಮನಿಸಿದೆ. ಅಧ್ಯಕ್ಷ ಕೆಎಕ್ಸ್ ಜುಲಪ್ಪನ್ ದ್ವೀಪದಂತಹ ರಚನೆ ಇರುವ ಗೂಗಲ್ ನಕ್ಷೆಗಳ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೊಸೈಟಿಯು ನಂತರ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯಕ್ಕೆ (ಕುಫೋಸ್) ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದೆ.
ಗೂಗಲ್ ನಕ್ಷೆಗಳ ಪ್ರಕಾರ, 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಕುಫೋಸ್‌ನ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.