ಇತ್ತೀಚಿನ ಸುದ್ದಿ
ಪದವು ಸೆಂಟ್ರಲ್ ವಾರ್ಡಿನ ಕುಟುಂಬಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಹಕ್ಕುಪತ್ರ ವಿತರಣೆ
03/06/2022, 22:21

ಮಂಗಳೂರು(reporterkarnataka.com);.ಮಂಗಳೂರು ಮಹಾನಗರ ಪಾಲಿಕೆಯ ಪದವು ಸೆಂಟ್ರಲ್ ವಾರ್ಡಿನ ಕುಟುಂಬಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಹಕ್ಕುಪತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕಳೆದ 3 ವರ್ಷಗಳಲ್ಲಿ ಅನೇಕ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಕೆಲವೊಂದು ಹಕ್ಕುಪತ್ರ ನೀಡಲು ಬಾಕಿಯಿದ್ದು ತ್ವರಿತವಾಗಿ ಅವುಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸ್ವಂತ ಸೂರು ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಕನಸು. ಕಳೆದ ಕೆಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡಿದ ಬಡ ಕುಟುಂಬಗಳಿಗೆ ನಮ್ಮ ಅವಧಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. ಅಭಿವೃದ್ಧಿಯ ಜೊತೆ ಜೊತೆಗೆ ಇಂತಹ ಕಾರ್ಯಗಳನ್ನೂ ಕೂಡ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ, ಉಪ ಆಯುಕ್ತರಾದ (ಅಡಳಿತ )ರವಿ ಕುಮಾರ್, ಸಮುದಾಯ ವ್ಯವಹಾರ ಅಧಿಕಾರಿ ಮಾಲಿನಿ ರೋಡ್ರಿಗಸ್, ನಗರ ಅಭಿಯಾನ ವ್ಯವಸ್ಥಾಪಕರು ಎನ್. ಚಿತ್ತರಂಜನ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.