ಇತ್ತೀಚಿನ ಸುದ್ದಿ
ಶಿಕ್ಷಣ ಸಚಿವ ನಾಗೇಶ್ ಮನೆಗೆ ಮುತ್ತಿಗೆ:ಗೃಹ ಸಚಿವ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
02/06/2022, 10:36
ತುಮಕೂರು(reporterkarnataka.com):-ಪಠ್ಯಪುಸ್ತಕ ಪರಿಷ್ಕರಣೆ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರ ತಿಪಟೂರಿನ ನಿವಾಸಕ್ಕೆ ನುಗ್ಗಿದ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ಕಾರ್ಯಕರ್ತರು ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ತುಮಕೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಈಗಾಗಲೇ ಪೊಲೀಸರು ೧೫ ಮಂದಿಯನ್ನು ೨ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯವನ್ನು ಖಂಡಿಸುತ್ತೇನೆ. ಇದಕ್ಕೆ ತಕ್ಕಪಾಠ ಕಲಿಬೇಕಾಗುತ್ತದೆ. ಮನೆಗೆ ನುಗ್ಗುತ್ತೇನೆ ಹೆದರಿಸುತ್ತೇನೆ ಎಂಬುದು ನಡೆಯುವುದಿಲ್ಲ . ಪಠ್ಯ ಪರಿಷ್ಕರಣೆ ವಿಚಾರಕ್ಕೆ ಈ ಘಟನೆ ನಡೆದಿದೆಯೋ ಎಂಬುದರ ಮಾಹಿತಿಯಿಲ್ಲ. ಬೆಂಗಳೂರು ೫ ದಾವಣಗೆರೆ ತುಮಕೂರು , ಚಿಕ್ಕಮಂಗಳೂರು ಕಡೆಗಳಿಂದ ಇವರುಗಳು ಬಂದಿದ್ದಾರೆ. ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ಹಕ್ಕಿದೆ ಆದರೆ ಮನೆಗೆ ನುಗ್ಗಿ ಗಲಬೆ ಸೃಷ್ಟಿ ಮಾಡುವುದು ಸರಿಯಲ್ಲ. ತಿಪಟೂರಿನಲ್ಲಿ ಎಲ್ಲ ಪಕ್ಷದವರು ಸೌರ್ಹಾಧತೆಯಿಂದ ಇದ್ದಾರೆ ಎಂದರು. ಈ ಘಟನೆ ನಡೆದಾಗ ಸಚಿವರು ಮನೆಯಲ್ಲಿ ಇರಲಿಲ್ಲ. ಅವರ ಪಿಎ ಹಾಗೂ ಮಗ ಇದ್ದರು. ಏಕಾಏಕಿ ಈ ಘಟನೆ ನಡಸಿರುವುದು ಖಂಡನೀಯ ಎಂದು ತಿಳಿಸಿದರು. ತಿಪಟೂರಿನಲ್ಲಿ ಎಲ್ಲರೂ ಸೌಹಾರ್ದ ವಾಗಿ ಇದ್ದೇವೆ. ಆ ಕಾರಣಕ್ಕೆ ಸೆಕ್ಯೂರಿಟಿ ನೀಡಿರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ ಎಂದರು.