7:33 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ದೇಶವನ್ನು ಮಲೇರಿಯಾ ಮುಕ್ತ ಮಾಡಲು ಪ್ರತಿಯೊಬ್ಬ ಪ್ರಜೆಯೂ ಪಣ ತೊಡಬೇಕು:ಆರೋಗ್ಯಾಧಿಕಾರಿ ಡಾ. ರಮ್ಯಾದೀಪಿಕಾ  

17/06/2021, 09:30

ಆರೋಗ್ಯಾಧಿಕಾರಿ ಡಾ. ರಮ್ಯಾದೀಪಿಕಾ

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com 

ಭಾರತವನ್ನು ೨೦೨೫ ಕ್ಕೆ ಮಲೇರಿಯಾ ಮುಕ್ತ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರು ಮುಂಜಾಗೃತ ಪಾಲನೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ . ರಮ್ಯ ದೀಪಿಕಾ ಕರೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಲೇರಿಯಾ ವಿರೋಧ ಮಾಸಾಚರಣೆ -೨೦೨೧ ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರಿಗೆ ಮುಂಜಾಗೃತ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷ ಕೊರೊನಾ ಸೋಂಕು ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ . ಮಲೇರಿಯ ಎಂಬುವುದು ಬಹಳ ಹಳೆಯದಾದ ಸಾಂಕ್ರಮಿಕ ಕಾಯಿಲೆಯಾಗಿದೆ ಎಂದರು.

ಮಲೇರಿಯ ಮಾದರಿಯಲ್ಲಿ ಸೊಳ್ಳೆಗಳಿಂದ ಡೆಂಗ್ಯೂ , ಮೆದುಳು ಜ್ವರ , ಚಿಕೂನ್‌ಗುನ್ಯ , ಆನೆಕಾಲು ರೋಗ ಮುಂತಾದ ಖಾಯಿಲೆಗಳು ಬರಲಿದ್ದು , ಇವುಗಳನ್ನು ರಕ್ತ ಪರೀಕ್ಷೆಯಿಂದ ಗುರುತಿಸಬಹುದಾಗಿದೆ. ಈ ರೋಗಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿಗಳು ಸಿಗಲಿದ್ದು , ಇದು ವಾಸಿ ಮಾಡಬಹುದಾದ ಖಾಯಿಲೆಯಾಗಿದೆ. ಪ್ರಾರಂಭದಲ್ಲಿ ಚಿಕಿತ್ಸೆ ಪಡೆಯುವುದರಿಂದ ಬೇಗನೆ ವಾಸಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು ಈ ಖಾಯಿಲೆಯು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತಾಗಲು ಪ್ರತಿ ವರ್ಷ ಮಲೇರಿಯಾ ವಿರೋಧ ಮಾಸಾಚರಣೆಯನ್ನು ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು. 

ಜಿಲ್ಲಾ ಆರೋಗ್ಯ ಇಲಾಖೆಯ ಕೀಟಶಾಸ್ತ್ರ ತಜ್ಞ ವೇಣುಗೋಪಾಲ್ ಮಾತನಾಡಿ, ಮಲೇರಿಯಾ ರೋಗವು ಸಾಮಾನ್ಯವಾಗಿ ಹೆಚ್ಚಾಗಿ ಮುಂಗಾರು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಮಲೇರಿಯಾ ರೋಗವು ಪ್ಲಾಸ್ಕೋಡಿಯ ಎಂಬ ರೋಗಾಣು ಹೊಂದಿದೆ ಎಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಮುನಿರಾಜು ಮಾತನಾಡಿ , ಸಾಮಾನ್ಯವಾಗಿ ಹಸಿರು ಇರುವ ಕಡೆ ಸೊಳ್ಳೆಗಳು ಇರುವುದು ಸಾಮಾನ್ಯವಾಗಿದೆ . ಪ್ರಸ್ತುತ ಕೊರೊನಾ ಬಹಳ ಅಪಾಯಕಾರಿಯಾಗಿದ್ದು , ಇದರ ಬಗ್ಗೆ ಬಹಳಷ್ಟು ಎಚ್ಚರಿಕೆ ಇರುವುದು ಅಗತ್ಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್ ಮಾತನಾಡಿ , ಪ್ರಸ್ತುತ ಕೋವಿಡ್ ಎದುರಿಸಿದವರಿಗೆ ಮಲೇರಿಯಾ ಯಾವ ಲೆಕ್ಕ ಎಂಬ ಭಾವನೆ ಬೇಡ. ಮಲೇರಿಯಾ ಬಗ್ಗೆ ಮುಂಜಾಗೃತೆಗಳ ಎಚ್ಚರಿಕೆ ಅಗತ್ಯ ಎಂದರು. 

ಆರೋಗ್ಯಾಧಿಕಾರಿ ಸತ್ಯನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು