9:51 AM Wednesday15 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ‘ಅನುಷ ಅನುರಾಗದ ಮುಸ್ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ

26/05/2022, 23:28

ಮಂಗಳೂರು(reporterkarnataka.com): ಮಂಗಳೂರಿನಲ್ಲಿ ಕವಿ ದಿವಂಗತ ಬಿ.ಎನ್. ಗೋಪಾಲಕೃಷ್ಣ ರಾವ್ ಅವರ ನೆನಪಿನಂಗಳದ “ಅನುಷ ಅನುರಾಗದ ಮುಸ್ಸಂಜೆ” ಸಾಂಸ್ಕೃತಿಕ ಕಾರ್ಯಕ್ರಮವು ಸುಬ್ರಮಣ್ಯ ಸಭಾ ಸಭಾಂಗಣದಲ್ಲಿ ನಡೆಯಿತು. 

ಕವಿ ಗೋಪಾಲಕೃಷ್ಣ ರಾವ್  ನೆನಪಿನ ಜೊತೆ,ರೂಪ ಲಕ್ಷ್ಮಿ ರಾವ್ ನಿರ್ಮಾಣದ, ಶರತ್ ಬಿಳಿನೆಲೆ ಸಂಗೀತ ನೀಡಿ ನಿರ್ದೇಶಿಸಿದ, ಕಿರುತೆರೆ, ಹಿರಿತೆರೆ ನಾಯಕಿ ತನ್ವಿ ರಾವ್ ಅಭಿನಯದ,ತನುಶ್ರೀ ಅವರ ಕಂಠಸಿರಿಯಿಂದ ಮೂಡಿಬಂದ “ಕವಿ” ದೃಶ್ಯಕಾವ್ಯ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಜೊತೆಗೆ ನಡೆದವು, ತನ್ನ ಅಪ್ರತಿಮ ಪ್ರತಿಭೆ ಮೂಲಕ ದೇಶದ ಗಮನ ಸೆಳೆದ, ರಾಷ್ಟ್ರಪತಿ ಮತ್ತು ಪ್ರಧಾನಿಗಳಿಂದ ಪ್ರಶಂಸಿಸಲ್ಪಟ್ಟ ತನ್ವಿ ರಾವ್ ಮತ್ತು ರಾಜ್ಯೋತ್ಸವ ಸಾಧಕಿ ಪ್ರಶಸ್ತಿ ಪುರಸ್ಕೃತ ತನುಶ್ರೀ  ಜೋಡಿ, ದೃಶ್ಯಕಾವ್ಯದ ಮೂಲಕ ಮತ್ತೊಮ್ಮೆ ಮನೆಮಾತಾಗಿದ್ದಾರೆ. ಅಲ್ಲದೆ ಯುವ ಸಂಗೀತ ನಿರ್ದೇಶಕ ಶರತ್ ಬಿಳಿನೆಲೆ ಯವರು ಉತ್ತಮ ಮತ್ತು ವಿಭಿನ್ನ ರೀತಿಯ ಪ್ರಯತ್ನದಲ್ಲಿ ಸಂಗೀತವನ್ನು ನೀಡಿ ಸಫಲರಾಗಿದ್ದಾರೆ.  ರೂಪಲಕ್ಷ್ಮಿ ತನ್ನ ಬಹುದಿನಗಳ ಕನಸಾದ “ಅನುಷಾ ಅನುರಾಗ ” ಯುಟ್ಯೂಬ್ ಚಾನೆಲ್ ಇತ್ತೀಚೆಗಷ್ಟೇ ಆರಂಭಿಸಿದ್ದು ಈ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ರತಿಮ ಸಾಧಕರನ್ನು ನಾಡಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.

ಸಭಾ ಕಾರ್ಯಕ್ರಮದಲ್ಲಿ ರಂಗಕರ್ಮಿ, ಚಲನಚಿತ್ರ ನಿರ್ಮಾಪಕ-ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್,  ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ, ಉದ್ಯಮಿ ಹರ್ಷಕುಮಾರ್ ಕ್ಯಾದಿಗೆ, ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್, ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ವೈದ್ಯಕೀಯ ಕ್ಷೇತ್ರದ ಸಾಧಕಿ  ವಾಣಿ ಸುಗುಣ ಕುಮಾರ್, ಇಂಡಿಯನ್ ಮಿಲಿಟರಿ ಹವಾಲ್ದಾರ್ ನವೀನ್, 

ದೀಕ್ಷಾ ಅಮೀನ್, ಜೂನಿಯರ್ ರಾಜ್ ಕುಮಾರ್  ಬಿರುದಾಂಕಿತ ಜಗದೀಶ್ ಶಿವಪುರ, ಶಶಿ ಗಿರಿವನ, ಇವರುಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ಪ್ರಸ್ತಾವನೆ- ನಿರೂಪಣೆ, ನಿರ್ದೇಶನ ಹಾಗೂ ವಂದನಾರ್ಪಣೆಯನ್ನು ದೃಶ್ಯ ಮಾಧ್ಯಮ ನಿರೂಪಕ ಚೇತನ್ ಶೆಟ್ಟಿ ನಡೆಸಿಕೊಟ್ಟರು. ಒಟ್ಟಾರೆಯಾಗಿ ಉತ್ತಮ, ನೂತನ ವಿಭಿನ್ನ ಕಾರ್ಯಕ್ರಮ ಜನರ ಮನಸ್ಸನ್ನು ಸೆಳೆಯುವುದರ ಜೊತೆಗೆ ಮಾದರಿ ಕಾರ್ಯಕ್ರಮ ಎನಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು