8:24 AM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಶಶಿರಾಜ್ ರಾವ್ ಕಾವೂರು ಅವರ “ಪುದ್ದು ಕೊಡ್ತರ್” ತುಳು ಕಾದಂಬರಿ ಲೋಕಾರ್ಪಣೆ

25/05/2022, 21:55

ಮಂಗಳೂರು(reporterkarnataka.com) :  ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ
ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಹಾಗೂ ಮಂಗಳೂರಿನ ಆಕೃತಿ ಹಾಗೂ ಆಶಯ ಪಬ್ಲಿಕೇಷನ್ಸ್ ಸಹಕಾರದೊಂದಿಗೆ ಶಶಿರಾಜ್ ರಾವ್ ಕಾವೂರು ಅವರ “ಪುದ್ದು ಕೊಡ್ತರ್” ತುಳು ಕಾದಂಬರಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್. ಎಫ್. ರಸ್ಕಿನ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಗೊಂಡಿತು.

ಶಶಿರಾಜ್ ರಾವ್ ಕಾವೂರು ಅವರು ವೃತ್ತಿಯಲ್ಲಿ ನ್ಯಾಯವಾದಿಯಾಗಿ ಆಸಕ್ತಿಯಲ್ಲಿ ನಾಟಕಕಾರರಾಗಿ, ಪುಸ್ತಕ ಬರಹಗಾರರಾಗಿ ಪರಿಚಿತರು. ನಾಟಕಕಾರರಾಗಿ, ನಾಟಕ ಬರಹಗಾರರಾಗಿ, ನಿರ್ದೇಶಕರಾಗಿ ಅಲ್ಲೂ ಸೈ ಎನಿಸಿಕೊಂಡವರು. ಹಲವು ನಾಟಕಗಳಿಗೆ ಗೀತ ರಚನೆಕಾರರಾಗಿ ದುಡಿದ ಅನುಭವ ಶಶಿರಾಜ್ ಕಾವೂರು ಅವರಿಗಿದೆ.

ಕೃತಿ ಲೋಕಾರ್ಪಣೆ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ ವಹಿಸಿದ್ದರು. ತುಳು -ಕನ್ನಡ ವಿದ್ವಾಂಸ ಡಾ. ಬಿ. ಎ. ವಿವೇಕ ರೈ 
ಅವರು “ಪುದ್ದು ಕೊಡ್ತರ್ “ಕೃತಿ ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾ. ದಾಮೋದರ ಶೆಟ್ಟಿ, ಉದ್ಯಮಿಗಳು ಹಾಗೂ ಚಲನಚಿತ್ರ ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ಕರ್ನಾಟಕ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್,  ಕೊರಗ ಅಭಿವೃದ್ಧಿ ಸಂಘ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಮಂಚಕಲ್ ಆಗಮಿಸಿದ್ದರು. 


ಕಾರ್ಯಕ್ರಮವನ್ನು ಡಾ. ಮಹಾಲಿಂಗ ಭಟ್ (ಮುಖ್ಯಸ್ಥರು ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು) ಪ್ರೊ. ಕೃಷ್ಣಮೂರ್ತಿ. (ಅಧ್ಯಕ್ಷರು ವಿಕಾಸ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು), ಗೋಪಾಲಕೃಷ್ಣ ಶೆಟ್ಟಿ (ಅಧ್ಯಕ್ಷರು ರಂಗ ಸಂಗಾತಿ ಮಂಗಳೂರು) ಅವರು ನಡೆಸಿಕೊಟ್ಟರು.  ಕಾರ್ಯಕ್ರಮದಲ್ಲಿ ಕೊರಲ್ ಕಲಾ ತಂಡದಿಂದ ಡೋಲು ಪ್ರಾಕ್ಷಿಕತೆ ವಿಶೇಷವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು