9:47 PM Wednesday27 - August 2025
ಬ್ರೇಕಿಂಗ್ ನ್ಯೂಸ್
ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು

ಇತ್ತೀಚಿನ ಸುದ್ದಿ

ಸರಕಾರ ಶಬ್ದ ಮಾಲಿನ್ಯದ ಬಗ್ಗೆ  ಸ್ಪಷ್ಟ ನಿಯಮ ಜಾರಿಗೆ ತರಲಿ: ಪ್ರತಿಪಕ್ಷದ ಉಪ ನಾಯಕ ಖಾದರ್ ಆಗ್ರಹ

24/05/2022, 07:52

ಮಂಗಳೂರು(reporterkarnataka.com): ಶಬ್ದ ಮಾಲಿನ್ಯದ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು, ಇದರ ಬಗ್ಗೆ ಸರ್ಕಾರ ಸ್ಪಷ್ಟ ನಿಯಮವನ್ನು ತರದೆ ಜನರನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷದ ಉಪನಾಯಕ
ಯು.ಟಿ. ಖಾದರ್ ಒತ್ತಾಯಿಸಿದರು.

ಅವರು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಶಬ್ದ ಮಾಲಿನ್ಯದ ಬಗ್ಗೆ ಅಧಿಕಾರಿಗಳಲ್ಲಾಗಲಿ ಜನ ಪ್ರತಿನಿಧಿಗಳಲ್ಲಾಗಲಿ ಕೇಳಿದರೆ ಅವರಿಗೆ ಏನೂ ಗೊತ್ತಿಲ್ಲ. ಆದುದರಿಂದ ಜನರು ಗೊಂದಲದಲ್ಲಿದ್ದಾರೆ ಅದನ್ನು ನಿವಾರಿಸಬೇಕು ಎಂದರು.

ಭಾರತ ದೇಶವು ಕಾನೂನು ಮತ್ತು ನಿಯಮಗಳಿಗಿಂತ ಹೆಚ್ಚಾಗಿ ಸಾಂಪ್ರದಾಯ ಹಾಗೂ ಸಂಸ್ಕೃತಿಯಲ್ಲಿ ನಡೆಯುತ್ತಿದ್ದು, ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯ ತನಕ ಶಬ್ದ ಮಾಲಿನ್ಯ ಮಾಡದಂತೆ ಆದೇಶವನ್ನು ಹೊರಡಿಸಿದ್ದು, ನಮ್ಮ ಸಾಂಪ್ರದಾಯಗಳಾದ ಕೋಲ, ನಾಟಕ, ಉರೂಸ್ ಮೊದಲಾದವುಗಳನ್ನು ಮಾಡಬೇಡಿ ಎನ್ನುವುದಾದರೆ ನಮ್ಮ ಯುವಜನರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೇಗೆ ತಿಳಿಸಿಕೊಡುವುದು. ಈ ನಿಯಮದಿಂದಾಗಿ ಭ್ರಷ್ಟಚಾರ ಹೆಚ್ಚಾಗುತ್ತದೆಯೇ ಹೊರತು ಬೇರೆನೂ ಪ್ರಯೋಜನವಿಲ್ಲ ಎಂದರು.

ನಾರಾಯಣಗುರು ವಿಚಾರವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪಠ್ಯ ಪುಸ್ತಕ ಮುದ್ರಣವಾಗುವ ಮೊದಲು ಪಿಡಿಎಫ್ ಫೈಲ್ ಅನ್ನು ಬಿಟ್ಟಿದ್ದು, ಅದನ್ನು ಈ ಯಾಕೆ ಡಿಲಿಟ್ ಮಾಡಿದ್ದಾರೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಬೇರೆ ಯಾರಾದರೂ ಬಂದು ಅಪ್‌ಲೋಡ್ ಮಾಡುತ್ತಾರಾ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು