9:12 PM Tuesday18 - November 2025
ಬ್ರೇಕಿಂಗ್ ನ್ಯೂಸ್
Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ದಿಲ್ಲಿಯಲ್ಲಿ ಭಾರಿ ವರುಣಾಘಾತ: ರಸ್ತೆ ಸಂಚಾರ ವ್ಯತ್ಯಯ; ಹಲವು ವಿಮಾನ ಯಾನ ರದ್ದು

23/05/2022, 17:45

ಹೊಸದಿಲ್ಲಿ(reporterkarnataka.com): ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ.

ಭಾರಿ ಗಾಳಿ ಮಳೆಯಿಂದಾಗಿ ದೆಹಲಿಯ ಕೆಲವು ಭಾಗಗಳಲ್ಲಿ ಮರಗಳು ಧರೆಗುರುಳಿವೆ. ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಮಳೆಯು ಪ್ರತಿಕೂಲ ಪರಿಣಾಮ ಬೀರಿದ್ದು ಹಲವು ವಿಮಾನಗಳ ಹಾರಾಟವನ್ನು ಸ್ಥಗಿತ ಗೊಳಿಸಲಾಗಿದೆ. ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರನ್ನು ಕೋರಿದ್ದಾರೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಮ ತೀವ್ರತೆಯ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಗಂಟೆಗೆ 60-90 ಕಿ.ಮಿ. ವೇಗದಲ್ಲಿ ಬಿರುಗಾಳಿಯು ಮುಂದುವರಿಯಲಿದೆ ಎಂದು ತಿಳಿಸಿದೆ. ಜನಸಾಮಾನ್ಯರು ಮನೆಯಿಂದ ಹೊರಬೀಳದೇ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು