1:03 PM Sunday17 - May 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ…

ಇತ್ತೀಚಿನ ಸುದ್ದಿ

ಬೆಂಗ್ರೆ: ಪುನರಾರಂಭಗೊಂಡ ಉಪ ಆರೋಗ್ಯ ಕೇಂದ್ರ ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಉದ್ಘಾಟನೆ

20/05/2022, 23:38

ಮಂಗಳೂರು(reporterkarnataka.com):ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆಯಲ್ಲಿ ಪುನರಾರಂಭಗೊಂಡ ಉಪ ಆರೋಗ್ಯ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. 

ಈ ಕುರಿತು ಮಾತನಾಡಿದ ಅವರು, ಬೆಂಗ್ರೆ ಭಾಗದ ಜನರ ಅನುಕೂಲಕ್ಕಾಗಿ ಈ ಹಿಂದೆ ನೀಡಿದ್ದ ಭರವಸೆಯಂತೆ ಉಪ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಎಂಸಿಎಫ್ ಸಂಸ್ಥೆಯ ಸಹಕಾರದೊಂದಿಗೆ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದ್ದು ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ಮುಖ್ಯಸ್ಥರು ವೈದ್ಯರನ್ನು ನೇಮಕಗೊಳಿಸಲು ಜಿಲ್ಲಾಡಳಿತದೊಂದಿಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಸದ್ಯ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವೈದ್ಯರನ್ನು ನೇಮಿಸಲಾಗಿದೆ ಎಂದರು.

ತೋಟ ಬೆಂಗ್ರೆ, ಕಸಬಾ ಬೆಂಗ್ರೆ ಹಾಗೂ ಬೊಕ್ಕಪಟ್ಣ ಬೆಂಗ್ರೆ ಪರಿಸರದ ನಾಗರಿಕರು ಚಿಕಿತ್ಸೆಗಾಗಿ ನಗರಕ್ಕೆ ಬರಬೇಕಾಗಿತ್ತು. ಬೆಂಗ್ರೆಯಲ್ಲಿ ಆರೋಗ್ಯ ಕೇಂದ್ರ ಪುನರಾರಂಭಿಸುವುದರಿಂದ ನಾಗರಿಕರಿಗೆ ಪ್ರಾಥಮಿಕ ಚಿಕಿತ್ಸೆ ಪಡೆಯುವ‌ ಸೌಲಭ್ಯ ಒದಗಿಸಲಾಗಿದೆ. ಬೆಂಗ್ರೆ ಪರಿಸರದ ಸಾರ್ವಜನಿಕರು ನಗರವನ್ನೇ ಅವಲಂಬಿಸಿರುವುದರಿಂದ ಬೇಡಿಕೆಗಳನ್ನು ಇಲ್ಲಿಯೇ ಪೂರೈಸಲು ಪ್ರಯತ್ನಿಸಲಾಗುವುದು. ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ ಎಂ.ಸಿ.ಎಫ್ ಸಂಸ್ಥೆಯ ಪ್ರಮುಖರಿಗೆ ಹಾಗೂ ಶ್ರೀನಿವಾಸ್ ಆಸ್ಪತ್ರೆಯ ಪ್ರಮುಖರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ಬೆಂಗ್ರೆಯ ನಾಗರಿಕರು ಪ್ರತಿಯೊಂದು ವಿಚಾರಕ್ಕೂ ಸುತ್ತು ಬಳಸಿ ಬರಬೇಕಾಗಿರುವುದರಿಂದ ಇಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಬಹಳಷ್ಟು ಉಪಯೋಗಕರವಾಗಿದೆ. ಈ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಎಂ.ಸಿ.ಎಫ್ ಮೆಡಿಕಲ್ ಚೀಫ್ ಡಾ. ಯೋಗೀಶ್ ಭಟ್, ಪಿ.ಆರ್.ಒ ಅವಿನಂದ್, ಶ್ರೀನಿವಾಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ರಾವ್, ಆರೋಗ್ಯಾಧಿಕಾರಿ ಕಿಶೋರ್ ಕೊಟ್ಟಾರಿ, ತಾಲೂಕು ಆರೋಗ್ಯಧಿಕಾರಿ ಸುಜಯ್ ಭಂಡಾರಿ, ಸ್ಥಳೀಯ ಕಾರ್ಪೋರೇಟರ್ ಬೆಂಗ್ರೆ, ಮಹಾಜನ ಸಭಾ ಉಪಾಧ್ಯಕ್ಷರಾದ ನರಸಿಂಹ, ಮಾಜಿ ಕಾರ್ಪೋರೇಟರ್ ಮೀರಾ ಕರ್ಕೇರ, ಮುಖಂಡರಾದ ಹೇಮಚಂದ್ರ, ಕಸಬಾ ಬೆಂಗ್ರೆ ಮಸೀದಿಯ ಅಧ್ಯಕ್ಷರಾದ ಬಿಲಾಲ್, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು