2:13 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಮಧುಗುಂಡಿ: 2019ರ ಮಹಾಮಳೆ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ಸಿಕ್ಕಿಲ್ಲ ಮನೆಭಾಗ್ಯ!

17/05/2022, 19:39

2019ರ ಮಹಾಮಳೆ. ಮನೆ ಮೇಲೆ ಬಂದ ಪ್ರವಾಹ ಮನೆ ಜೊತೆ ಆ ಜೀವವನ್ನ ಕೂಡ ಬಲಿ ತೆಗೆದುಕೊಂಡಿತು. ಅಷ್ಟೇ ಅಲ್ಲ ಬದುಕಿಗೆ ಆಧಾರವಾಗಿದ್ದ ಗದ್ದೆ-ತೋಟಗಳು ಕೂಡ ಕೊಚ್ಚಿ ಹೋಗಿದ್ದವು. ಆ ವೇಳೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವ ಮಾತನಾಡಿದವರು ಇದೀಗ ಗಪ್ ಚುಪ್ ಆಗಿದ್ದಾರೆ. ಸರಕಾರದ ಮಾತನ್ನ ನಂಬಿದವರು ಇದೀಗ ಕೂಲಿ ಮಾಡಿ ಜೀವನ ಸಾಗಿಸುವಂತಾಗಿದೆ.

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬದುಕಿಗೆ ಅನ್ನ ಕೊಟ್ಟ ಜಾಗ.! ಜೀವನಕ್ಕೆ ದಾರಿ ಕೊಟ್ಟ ಸ್ಥಳ.! ಆದ್ರೀಗ ಆ ಜಾಗ ಕಹಿ ನೆನಪಿನ ಭಂಡಾರವಾಗಿದೆ. ಸಾಕಪ್ಪ, ಸಾಕು ಈ ಬದುಕು ಅನ್ನುವಷ್ಟು ಭ್ರಮನಿರಸ ತಂದೊಡ್ಡಿದೆ.! ಜೀವಮಾನವಿಡೀ ಹೊಟ್ಟೆ ಬಟ್ಟೆ ಕಟ್ಟಿ ಗಳಿಸಿದ್ದು ಕ್ಷಣಮಾತ್ರದಲ್ಲಿ ನಾಶವಾಗಿಬಿಟ್ಟಿದೆ.! ಧೈರ್ಯ ಕೊಟ್ಟವರು, ಭರವಸೆ ನೀಡಿದವರು ಕಾಣೆಯಾಗಿದ್ದಾರೆ.


ಇಂದು ಸರಿಯಾಗುತ್ತೆ, ನಾಳೆ ಸರಿಯಾಗುತ್ತೆ ಅಂತಾ ಅಂದುಕೊಂಡಿದ್ದ ಬದುಕು ಮೂರಾಬಟ್ಟೆಯಾಗಿದೆ. ಹೌದು, ಇದು 2019ರ ಮಹಾಮಳೆಗೆ ಸಿಲುಕಿ ಬದುಕು ಕಳೆದುಕೊಂಡವರ ದುಸ್ಥಿತಿ. ಅಂದಾಗೆ ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮ. ಮೂರು ವರ್ಷಗಳ ಹಿಂದೆ ಧುತ್ತೆಂದು ಬಂದ ಪ್ರವಾಹ ಈ ಗ್ರಾಮದ ಅನೇಕ ಮನೆಗಳನ್ನ ಅಪೋಶನ ಪಡೆದಿತ್ತು. ಕೇವಲ ಮನೆಗಳು ಮಾತ್ರವಲ್ಲ ಈ ಗ್ರಾಮದ ನಾಗಪ್ಪಗೌಡ ಎಂಬ ವೃದ್ಧರನ್ನ ಬಲಿಪಡೆದಿತ್ತು. ಮನೆ ಸಮೇತ ಕೊಚ್ಚಿ ಹೋದ ನಾಗಪ್ಪಗೌಡರ ಮೃತದೇಹ ಸಿಕ್ಕಿದ್ದು ಬರೋಬ್ಬರಿ ಒಂದು ವಾರದ ಬಳಿಕ. ಗದ್ದೆ-ತೋಟಗಳು ಸಂಪೂರ್ಣ ನಾಶವಾಗಿದ್ವು. ಈ ವೇಳೆ ಮಾಧ್ಯಮಗಳು ಕೂಡ ಹಲವು ಕಾರ್ಯಕ್ರಮಗಳನ್ನ ಬಿತ್ತರಿಸಿ, ಸುದ್ದಿ ಪ್ರಕಟಿಸಿ ಸಂತ್ರಸ್ತರ ನೈಜ ಸ್ಥಿತಿಯನ್ನ ಸರ್ಕಾರದ ಮುಂದಿಟ್ಟಿತ್ತು. ಆ ವೇಳೆ ಸ್ಪಂದಿಸಿದ ಜಿಲ್ಲಾಡಳಿತ, ಸರ್ಕಾರ, ಜನಪ್ರತಿನಿಧಿಗಳು ಸಂತ್ರಸ್ಥರಿಗೆ ಹೊಸ ಬದುಕನ್ನ ಕಟ್ಟಿಕೊಡುವ ಮಾತು ಕೊಟ್ಟಿದ್ದರು. ಇದೆಲ್ಲಾ ನಡೆದು ಬರೋಬ್ಬರಿ ಮೂರು ವರ್ಷಗಳು ಕಳೆದಿವೆ. ಈಗ ಹೋಗಿ ಆ ದುರ್ಗಮ ಸ್ಥಳವನ್ನ ನೋಡಿದ್ರೆ ಮನೆಯ ಅವಶೇಷಗಳು, ಕೆಲ ವಸ್ತುಗಳು ಕಣ್ಣಿಗೆ ಕಾಣುತ್ತೆ ಬಿಟ್ರೆ, ಇಂತದೊಂದು ಅನಾಹುತ ನಡೆದಿತ್ತು ಅನ್ನೋದನ್ನ ಕಲ್ಪನೆ ಮಾಡೋದಕ್ಕೂ ಸಾಧ್ಯವಾಗಲ್ಲ. ಪ್ರವಾಹದ ವೇಳೆಯಲ್ಲಿ ತಂದೆಯನ್ನ ಕಣ್ಮುಂದೆಯೇ ಕಳೆದುಕೊಂಡ ಮಕ್ಕಳು ಇಂದಿಗೂ ಕೊರಗುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಆ ಕುಟುಂಬಕ್ಕೊಂದು ಮನೆ ಕಟ್ಟಿಕೊಡಲು ಜಿಲ್ಲಾಡಳಿತಕ್ಕೆ ಆಗದೇ ಇರೋದು ನಿಜಕ್ಕೂ ದುರಂತವೇ ಸರಿ.

ಈ ಕುಟುಂಬಕ್ಕೆ ಮನೆ ಕಟ್ಟಿಕೊಡೋದು ಇರಲಿ, ಸಂತ್ರಸ್ಥರಿಗೆ ಮನೆಯ ನೀಡುವ ಪಟ್ಟಿಯಲ್ಲಿ ಇವರ ಹೆಸರೇ ಕಣ್ಮರೆಯಾಗಿರೋದು ನಿಜಕ್ಕೂ ದುರಂತ. ಒಂದು ಕಾಲದಲ್ಲಿ ಗದ್ದೆ-ತೋಟ ಅಂತಾ ಅನೂಕೂಲಕರ ಜೀವನ ನಡೆಸುತ್ತಿದ್ದ ಈ ಕುಟುಂಬ ಮಳೆಯಿಂದ ಇದೀಗ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದು ನಿಂತಿದೆ. ಒಂದೊತ್ತಿನ ಊಟಕ್ಕೂ ಪರದಾಟ ನಡೆಸುವ ದಯನೀಯ ಸ್ಥಿತಿ ಎದುರಾಗಿದೆ. ಮಕ್ಕಳಿಗೆ ಶಿಕ್ಷಣವನ್ನ ಕೊಡಿಸಲಾಗದೇ ಪರಿತಪಿಸುವ ದುಸ್ಥಿತಿ ಬಂದಿದೆ.

– ಸುರೇಶ್, ಮೃತ ನಾಗಪ್ಪಗೌಡರ ಪುತ್ರ

ಇದು ಕೇವಲ ನಾಗಪ್ಪಗೌಡರ ಕುಟುಂಬದ ಕಣ್ಣೀರ ಕಥೆ ಮಾತ್ರವಲ್ಲ, ಬದಲಾಗಿ ಈ ಗ್ರಾಮದಲ್ಲಿ ಮನೆ ಕಳೆದುಕೊಂಡು ಆರೇಳು ಕುಟುಂಬದ ದುಸ್ಥಿತಿಯೂ ಕೂಡ ಇದೆ. ಇಷ್ಟಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈಗಾಗಲೇ ಮೂರು ವರ್ಷದಿಂದ ಹೀನಾಯ ಸ್ಥಿತಿಯಲ್ಲಿ ಜೀವನವನ್ನ ಮಾಡುತ್ತಿದ್ದೇವೆ. ಇನ್ನೂ ಎಷ್ಟು ವರ್ಷ ಇದೇ ರೀತಿ ಬದುಕಬೇಕು ಅಂತಾ ಸಂತ್ರಸ್ಥರು ಅಳಲನ್ನ ತೋಡಿಕೊಂಡಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟವರು ಸಂತ್ರಸ್ಥರಿಗೆ ಹೊಸ ಬದುಕನ್ನ ಕಟ್ಟಿಕೊಡುವ ಕೆಲಸವನ್ನ ಮಾಡಲಿ ಅನ್ನೋದು ನಮ್ಮ ಆಶಯ.

– ಶಾರದಾ, ಮೃತ ನಾಗಪ್ಪಗೌಡರ ಸೊಸೆ

ಇತ್ತೀಚಿನ ಸುದ್ದಿ

ಜಾಹೀರಾತು