7:36 PM Saturday3 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಬಡವರ ಅನ್ನಕ್ಕೂ ಕನ್ನ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್ ಗಳಿಗೆ ಸಪ್ಲೈ: ದಿನಕ್ಕೆ ಲಕ್ಷಗಟ್ಟಲೆ ಖಮಾಯಿ! 

17/05/2022, 10:13

ಬೆಂಗಳೂರು(reporterkarnataka.com):  ಬಡ ಹಾಗೂ ಮದ್ಯಮ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯಾದ್ಯಂತ ತೆರೆದಿರೋದೆ ಇಂದಿರಾ ಕ್ಯಾಂಟೀನ್ ನ ಬಹು ದೊಡ್ಡ ಕರ್ಮಕಾಂಡ ಹೊರಗೆ ಬಿದ್ದಿದೆ. ಇಲ್ಲಿ ಬೆಯಿಸಲಾದ ಊಟ, ತಿಂಡಿಯನ್ನು ಹೋಟೆಲ್ ಗಳಿಗೆ ಸೇಲ್ ಮಾಡಲಾಗುತ್ತಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನ ಪ್ರತಿ ವಾರ್ಡ್ ಗಳಲ್ಲಿಯೂ ಇಂದಿರಾ ಕ್ಯಾಂಟೀನ್  ನಿರ್ಮಾಣ ಮಾಡಲಾಗಿದೆ. ಈ ಮೂಲಕ ಬಡ ವರ್ಗದವರ ಹಸಿವನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಇಂದಿರಾ ಕ್ಯಾಂಟೀನ್ ಗೆ ಬರೋ ಸಂಖ್ಯೆ ಕಡಿಮೆಯಾಗಿದ್ದನ್ನೇ ನೇಪವಾಗಿಟ್ಟುಕೊಂಡು, ಸಿಬ್ಬ ಕಳ್ಳಾಟ ಆರಂಭಿಸಲಾಗಿದೆ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳ ದೊಡ್ಡ ಕರ್ಮಕಾಂಡ ಇದೀಗ ಬಯಲಾಗಿದೆ.

ಇಂದಿರಾ ಕ್ಯಾಂಟೀನ್ ತಿಂಡಿ, ಊಟಕ್ಕೆ ಜನರು ಬಾರದ ಕಾರಣ, ಕೆಲ ಕ್ಯಾಂಟೀನ್ ಸಿಬ್ಬಂದಿಗಳು, ಹೋಟೆಲ್ ಮಾಲೀಕರೊಂದಿಗೆ ಶಾಮೀಲಾಗಿ, ಇಂದಿರಾ ಕ್ಯಾಂಟೀನ್ ಊಟವನ್ನು ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿರೋದಾಗಿ ತಿಳಿದು ಬಂದಿದೆ.

ಬೆಂಗಳೂರಿನ ವಿಶ್ವನಾಥ ನಾಗೇನಹಳ್ಳಿಯ ವಾರ್ಡ್ ನಂ.22ರಲ್ಲಿ, ಹೆಬ್ಬಾಳ್ಳ ಪ್ಲೈಓವರ್, ಶಿವಾಜಿ ನಗರದ ವಾರ್ಡ್ ನಂ.92ರಲ್ಲಿ, ಡಾಲರ್ಸ್ ಕಾಲೋನಿ ಬಳಿಯ ರಾಧಾಕೃಷ್ಣ ದೇವಸ್ಥಾನದ ವಾರ್ಡ್ ನಂ.18ರಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೋಟೆಲ್ ಗೆ ಊಟ ಬೇಕು, ನಾವು ಬೇರೆ ಕಡೆ ಮಾರಿಕೊಳ್ಳುತ್ತೇವೆ ಅಂದ್ರೇ ಸಾಕು, ದಿನಾ ಬನ್ನಿ ಕೊಡ್ತೀವಿ ಎಂಬುದಾಗಿ ಕ್ಯಾಂಟೀನ್ ಸಿಬ್ಬಂದಿ ಹೇಳುತ್ತಿದ್ದಾರೆ.

ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಹೋಟೆಲ್ ನವರು ಕೇಳುವಷ್ಟು ತಿಂಡಿ, ಊಟ ನೀಡಲಾಗುತ್ತದೆ. ಒಂದು ವೇಳೆ ಗ್ರಾಹಕರು ಹೆಚ್ಚು ಬಂದ್ರು, ಹೋಟೆಲ್ ಗೆ ಕ್ಯಾಂಟೀನ್ ತಿಂಡಿ, ಊಟ ಸೇಲ್ ಮಾಡಿದ ಕಾರಣ, ಇಲ್ಲ ಎಂದು ಹೇಳಲಾಗುತ್ತಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಊಟವನ್ನು, ಸಿಬ್ಬಂದಿಗಳು ಅಡ್ಡದಾರಿಯ ಮೂಲಕ ಹೋಟೆಲ್ ಗಳಿಗೆ, ಕೇಳಿದವರಿಗೆ ಮಾರಿಕೊಳ್ಳುತ್ತಿರೋ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು