ಇತ್ತೀಚಿನ ಸುದ್ದಿ
ಮೂಡುಬಿದರೆ ಯುವತಿಗೆ ಡ್ರಗ್ಸ್ ನೀಡಿ ಹಲವು ಬಾರಿ ಅತ್ಯಾಚಾರ: ಆರೋಪಿಗೆ 7 ದಿನ ಪೊಲೀಸ್ ಕಸ್ಟಡಿ ಪರವಾಗಿlq
14/05/2022, 15:12
ಮಂಗಳೂರು(reporterkarnataka.com) : ಮೂಡಬಿದಿರೆ ನಿವಾಸಿ ಯುವತಿಯನ್ನು ಮದುವೆಯಾಗುವ ಅಮಿಷವೊಡ್ಡಿ ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಉಳ್ಳಾಲದ ಪೆರ್ಮನ್ನೂರು ಗ್ರಾಮದ ಶಾನ್ ನವಾಸ್ (36) ಎಂಬಾತನಿಗೆ ಒಂದು ವಾರ ಪೊಲೀಸ್ ಕಸ್ಟಡಿ ನೀಡಲಾಗಿದೆ.
ಆರೋಪಿಯು ಯುವತಿಯನ್ನು ವಿವಿಧ ಕಡೆ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೇಪ್ ಮಾಡಿರುವ ಆರೋಪ ಇದೆ. ಮಾದಕವಸ್ತು ನೀಡಿ ಯುವತಿಯ ನಗ್ನ ಚಿತ್ರ ಚಿತ್ರಿಕರಣ ಮಾಡಿ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕಿ 1.50 ಲಕ್ಷರೂ. ಸುಲಿಗೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.
ಯುವತಿಯು ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.














