2:00 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಆ್ಯಸಿಡ್ ದಾಳಿಗೊಳಗಾದ ಹೆಣ್ಮಕ್ಕಳ ಪರವಾಗಿ ನಿಂತ ರಾಜ್ಯ ಸರಕಾರ: ನಿವೇಶನ, 10 ಸಾವಿರ ಮಾಸಾಶನ ಘೋಷಿಸಿದ ಸಿಎಂ

14/05/2022, 09:27

ಬೆಂಗಳೂರು(reporterkarnataka.com): ಆ್ಯಸಿಡ್  ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಮಾಸಾಶನವನ್ನು 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಜೊತೆಗೆ ನಿವೇಶನ ಇಲ್ಲದವರಿಗೆ ನಿವೇಶನ ಕೊಟ್ಟು ಮನೆ ನಿರ್ಮಿಸಿಕೊಡಲಾಗುತ್ತದೆ. 

ಸ್ವ ಉದ್ಯೋಗ ಕೈಗೊಳ್ಳುವವರಿಗೆ 5 ಲಕ್ಷ ಸಹಾಯ ಧನ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದು ಹೆಲೋ ಸಚಿವರೇ ಸಹಾಯವಾಣಿಗೆ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅವರು, ಆ್ಯಸಿಡ್ ದಾಳಿಗೆ ಒಳಗಾದಮ್ಮ ಅಕ್ಕ-ತಂಗಿಯರ ಬದುಕು ಬಹಳ ಕಷ್ಟ. ಅವರು ಮಾನಸಿಕವಾಗಿ ಹೇಗೆ ತಡೆದುಕೊಳ್ಳುತ್ತಾರೋ ಅನ್ನುವಂತದ್ದು ನನಗೆ ಬರೀ ಯೋಚನೆ ಮಾಡಿದ್ರೇ ದುಖವಾಗಲಿದೆ. ಬರೀ ನಮ್ಮ ಕಣ್ಣಲ್ಲಿ ಏನಾದ್ರೂ ಹೋದ್ರೆ ಚಡಪಡಿಸುತ್ತೇವೆ. ಸಣ್ಣ ದೂಳಿನ ಕಣ ಹೋದ್ರೆ ನೋವು ಪಡೆಯುತ್ತೇವೆ ಎಂದರು.

ಆ್ಯಸಿಡ್  ದಾಳಿಗೊಳಗಾದ ಅನೇಕರು ಕಣ್ ಕಳೆದುಕೊಂಡಿದ್ದಾರೆ. ಆಹಾರ ಸೇವಿಸೋದಕ್ಕೆ ಆಗೋದಿಲ್ಲ. ಊಟ ಸೇರೋದಿಲ್ಲ. ಉಸಿರಾಡೋದಕ್ಕೂ ಸಮಸ್ಯೆ. ಹೀಗೆ ದಾಳಿಗೊಳಗಾದಂತ ಅನೇಕರನ್ನು ಭೇಟಿಯಾಗಿದ್ದೇನೆ. ಪುರುಷ ಪ್ರಧಾನ ಸಮಾಜ ಅವರನ್ನು ರಕ್ಷಣೆ ಮಾಡಬೇಕು. ದಾಳಿಗೆ ಒಳಗಾಗಿದ್ದರೂ ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬದುಕಿನ ಬಗ್ಗೆ ಎಷ್ಟು ಆತ್ಮಸ್ಥೈರ್ಯ ಇರಬೇಕು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು