11:46 PM Saturday21 - December 2024
ಬ್ರೇಕಿಂಗ್ ನ್ಯೂಸ್
ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ… ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್, 159 ಬಾಂಗ್ಲಾದೇಶ ಮೂಲದವರ ಬಂಧನ: ಗೃಹ…

ಇತ್ತೀಚಿನ ಸುದ್ದಿ

ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಅಗಲದ ಬೃಹತ್ ಕ್ಷುದ್ರಗ್ರಹ; ವಿಜ್ಞಾನಿಗಳ ಎಚ್ಚರಿಕೆ

13/05/2022, 20:55

ವಾಷಿಂಗ್ಟನ್(reporterkarnataka.com):  ಕ್ಷುದ್ರ ಗ್ರಹಗಳು ನಿರ್ದಿಷ್ಟ ಕಕ್ಷೆ ಇಲ್ಲದೆ ಅಡ್ಡಾದಿಡ್ಡಿ ಸುತ್ತುವ ವಿಷಯ 7ನೇ ತರಗತಿ ಫೈಲಾದವರಿಗೂ ತಿಳಿದ ವಿಷಯ. ಇದೀಗ 1,608 ಅಡಿ ಅಗಲವಿರುವ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತಲೇ ಬರುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದಕ್ಕೆ 388945 (2008 TZ3) ಎಂದು ಹೆಸರಿಟ್ಟಿದೆ. ಈ ದೈತ್ಯ ಬಾಹ್ಯಾಕಾಶ ಶಿಲೆ ಮೇ 16ರಂದು ಮುಂಜಾನೆ 2.48ಕ್ಕೆ ಭೂಮಿಗ ಸಮೀಪಿಸಲಿದೆ. 

ನ್ಯೂಯಾರ್ಕ್‌ ನ ಐಕಾನಿಕ್ ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಹೋಲಿಸಿದರೆ, 1,454 ಅಡಿಗಳಷ್ಟು ದೊಡ್ಡದಾಗಿದೆ. ಇದು ಐಫೆಲ್ ಟವರ್‌ಗಿಂತಲೂ ದೊಡ್ಡದಾಗಿದೆ ಮತ್ತು ಈ ದೈತ್ಯ ಕ್ಷುದ್ರಗ್ರಹದೆದುರು ಲಿಬರ್ಟಿ ಪ್ರತಿಮೆಯು ಕುಬ್ಜವಾಗಿ ಕಾಣುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬಾಹ್ಯಾಕಾಶ ಬಂಡೆ ಒಂದು ವೇಳೆ ಭೂಮಿಗೆ ಅಪ್ಪಳಿಸಿದರೆ ಭೀಕರ ಹಾನಿಗಳನ್ನುಂಟು ಮಾಡುತ್ತದೆ. ಆದರೆ ಬಾಹ್ಯಾಕಾಶ ವಿಜ್ಞಾನಿಗಳ ಲೆಕ್ಕಾಚಾರಗಳ ಪ್ರಕಾರ ಇದು ಸುಮಾರು 2.5 ಮಿಲಿಯನ್ ಮೈಲುಗಳಷ್ಟು ದೂರದಿಂದ ನಮ್ಮನ್ನು ಹಾದುಹೋಗುತ್ತದೆ. ಇದು ನಮಗೆ ಭಾರೀ ದೂರದಂತೆ ಭಾಸವಾಗುತ್ತದ್ದಾದರೂ ಬಾಹ್ಯಾಕಾಶ ಪರಿಭಾಷೆಯಲ್ಲಿ ಇದು ʼಚಿಕ್ಕ ಅಂತರʼ ವಷ್ಟೆ.

ಈ ಕ್ಷುದ್ರಗ್ರಹ (388945) ಭೂಮಿಯತ್ತ ಸಾಗಿಬರುತ್ತಿರುವುದು ಇದೇ ಮೊದಲೇನಲ್ಲ. ಇದು ಮೇ 2020 ರಲ್ಲಿ ಭೂಮಿಗೆ ಬಹಳ ಸಮೀಪದಲ್ಲಿ ಹಾದುಹೋಗಿತ್ತು. ಆಗ ಕೇವಲ 1.7 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದುಹೋಗಿತ್ತು. ಬಾಹ್ಯಾಕಾಶ ವಿಜ್ಞಾನಿಗಳ ಪ್ರಕಾರ ಪ್ರತಿ ಎರಡು ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಸುತ್ತುತ್ತಿರುವಾಗ ಈ ಬಾಹ್ಯಾಕಾಶ ಶಿಲೆಯು ಭೂಮಿಯನ್ನು ಹಾದುಹೋಗುತ್ತದೆ. ಮುಂದಿನ ಬಾರಿ ಅದು ಮೇ 2024 ರಲ್ಲಿ ಭೂಮಿಯ ಹತ್ತಿರ ಹಾದುಹೋಗುತ್ತದೆ. ಆದರೆ ಆಗ ಅದರ ಅಂತರ ಅತಿಹೆಚ್ಚು ದೂರ – 6.9 ಮಿಲಿಯನ್ ಮೈಲುಗಳಾಗಿರುತ್ತದೆ. ಆನಂತರ ಕ್ಷುದ್ರಗ್ರಹವು ಮೇ 2163 ರಲ್ಲಿ ಮತ್ತೆ ಭೂಮಿಯ ಬಳಿ ಬರಲಿದೆ. ಕ್ಷುದ್ರಗ್ರಹವು 4.65 ಮಿಲಿಯನ್ ಮೈಲುಗಳ ಒಳಗೆ ಬಂದರೆ ಮತ್ತು ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿದ್ದರೆ, ಬಾಹ್ಯಾಕಾಶ ಸಂಸ್ಥೆಗಳು ಅದನ್ನು “ಸಂಭಾವ್ಯ ಅಪಾಯಕಾರಿ” ಎಂದು ಪರಿಗಣಿಸಲಾಗುತ್ತವೆ.

ಕ್ಷುದ್ರಗ್ರಹಗಳು ಬಾಹ್ಯಾಕಾಶ ಶಿಲಾಖಂಡರಾಶಿಗಳಾಗಿವೆ, ಈ ಗ್ರಹದ ಅವಶೇಷಗಳು ವಿಶಾಲ ಹಾಗೂ ಅನಂತವಾದ ಬಾಹ್ಯಾಕಾಶದಲ್ಲಿ ಸುತ್ತುತ್ತಿರುತ್ತವೆ. ಕೆಲವು ಬೃಹತ್ ಬಾಹ್ಯಾಕಾಶ ಬಂಡೆಗಳು ಭೂಮಿಗೆ ಅಪಾಯಕಾರಿ ಎಂದು ವಿಜ್ಞಾನಿಗಳು ದಶಕಗಳಿಂದ ಎಚ್ಚರಿಸಿದ್ದಾರೆ.

ಆದ್ದರಿಂದ, ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಈ ಅಪಾಯಕಾರಿ ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸಲು ಯೋಜನೆಯನ್ನು ರೂಪಿಸುತ್ತಿವೆ. ಈ ಯೋಜನೆಯ ಭಾಗವಾಗಿ, NASA ಇತ್ತೀಚೆಗೆ ತನ್ನ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART) ಮಿಷನ್ ಅನ್ನು ಪ್ರಾರಂಭಿಸಿತು. ಅಕಸ್ಮಾತ್‌ ಕ್ಷುದ್ರಗ್ರಹವೊಂದು ಭೂಮಿಯ ಕಡೆಗೆ ಧಾವಿಸಿ ಬಂದರೆ ಆ ಕ್ಷುದ್ರಗ್ರಹಕ್ಕೆ ಡರ್ಟ್‌ ಕ್ರಾಫ್ಟ್‌ ಡಿಕ್ಕಿಯಾಗಿ ಅದನ್ನು ದಿಕ್ಕು ತಪ್ಪಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು