ಇತ್ತೀಚಿನ ಸುದ್ದಿ
ತೊಟ್ಟಂನಲ್ಲಿ ಕಾರು-ಬುಲೆಟ್ ಮಧ್ಯೆ ಭೀಕರ ಅಪಘಾತ; ಪವಾಡಸದೃಶ ಪಾರಾದ ಸವಾರ
13/05/2022, 14:14
ಉಡುಪಿ(reporterkarnataka.com)
ಮಲ್ಪೆ ತೊಟ್ಟಂನ ಗಣೇಶೋತ್ಸವ ಸಮಿತಿಯ ಎದುರಿನಲ್ಲಿ ಕಾರು ಮತ್ತು ಬುಲೆಟ್ ಮಧ್ಯೆ ಅಪಘಾತ ಇಂದು ನಡೆದಿದ್ದು, ಬುಲೆಟ್ ಸವಾರರು
ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.





ಕಾರು ಚಾಲಕ ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬುಲೆಟ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ತಕ್ಷಣವೇ ರವಿ (ಸಿಟಿಜನ್ ಸರ್ಕಲ್) ಅವರು ಸಮಾಜ ಸೇವಕ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿದ್ದು, ಕರೆಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ ಈಶ್ವರ್ ಅವರು ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.














