2:57 PM Saturday25 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳನ್ನು ಸಂಸ್ಕಾರವಂತ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಸೇವೆ ಅನನ್ಯ: ಶ್ರೀ ಪ್ರಸನ್ನ ಸ್ವಾಮೀಜಿ ಅಭಿಮತ

12/05/2022, 22:22

ಡಿ.ಆರ್ .ಜಗದೀಶ್ ನಾಗಮಂಗಲ ಮಂಡ್ಯ

info.reporterkarnataka@gmail.com

ಶಿಕ್ಷಣದ ಬೇರು ಎಂದೇ ಕರೆಯಲ್ಪಡುವ  ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ತಳಹದಿಯೊಂದಿಗೆ ಉದಯೋನ್ಮುಖ ರನ್ನಾಗಿಸುವುದೇ ಶ್ರೇಷ್ಠ ಶಿಕ್ಷಣ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. 

ಅವರಿಂದು ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ  ಆಯೋಜಿಸಿದ್ದ ಮೂರು ದಿನಗಳ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾರ್ಯಗಾರದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೋಧಕರೇ ತಮ್ಮ ಆದರ್ಶವೆಂದು  ಅನುಸರಿಸುವ ಮಕ್ಕಳಿಗೆ ಮಾದರಿಯಾಗಿದ್ದು,  ವಿಶಿಷ್ಟ ಪಾಂಡಿತ್ಯ ಮತ್ತು ಅನುಭವದೊಂದಿಗೆ ಬೋಧಿಸಿ ಸಂಸ್ಕಾರವಂತ ಸತ್ಪ್ರಜೆಗಳನ್ನು  ಸೃಷ್ಟಿಸಿದರೆ ತಮ್ಮ ಬದುಕೂ ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರತಿಭೆಗಳನ್ನು ಗುರುತಿಸಿ ಆ ಮೂಲಕ ರಾಷ್ಟ್ರಮಟ್ಟದ ಸಾಧನೆಗೈಯ್ಯುವ ಮಾರ್ಗದರ್ಶನ ನೀಡಿ ಮಾದರಿ ಶಿಕ್ಷಕರಾಗಿ ಎಂದು ಆಶೀರ್ವದಿಸಿದರು.

ಉದ್ಘಾಟನೆ ನೆರವೇರಿಸಿದ ಮಂಡ್ಯ ಡಯಟ್ ನ ಪ್ರಾಂಶುಪಾಲ, ಪದನಿಮಿತ್ತ ಉಪನಿರ್ದೇಶಕರೂ ಆದ ಎಂ ಶಿವಮಾದಪ್ಪ ಅವರು ಮಾತನಾಡಿ, ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಮಹಿಳೆಯರನ್ನೇ ಅಧ್ಯಾಪಕರನ್ನಾಗಿ ನೇಮಿಸುವುದು ಅವರ ತಾಳ್ಮೆ ಮತ್ತು ಪ್ರೀತಿಯ ತಾಯ್ತನಕ್ಕಾಗಿ, ಹಾಗಾಗಿ ತಾವು ಮಕ್ಕಳ ಶೈಕ್ಷಣಿಕ ಮನೋಭಾವವನ್ನು ಅರಿತು ಆತ್ಮವಿಶ್ವಾಸ ಮೂಡಿಸುವಂತಹ ಮಾರ್ಗದಲ್ಲಿ ಬೋಧಿಸಬೇಕು. ಬಣ್ಣಗಳ ಪರಿಕಲ್ಪನೆಯನ್ನು ಮೂಡಿಸಿ ಕಲಿಕೆ ಮತ್ತು ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುವ ಪ್ರೇರೇಪಣಾ ರೀತಿಯ ಬೋಧನೆಯನ್ನು ಅನುಸರಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನೀಡಿರುವ ನಿಯಮಗಳನ್ನು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡು ಹೊಸ ತಲೆಮಾರಿನ ಪ್ರತಿಭಾವಂತ ಮಕ್ಕಳನ್ನು ಈ  21ನೇ ಶತಮಾನದ ಆಧುನಿಕ ತಂತ್ರಜ್ಞಾನದ ಜಗತ್ತಿಗೆ ನವೀನ ಮಾದರಿಯಲ್ಲಿಯೇ ತಯಾರಿಸಲು ಸನ್ನದ್ದರಾಗಿ ಎಂದು ತಿಳಿಸಿದರು.   

 ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿಕ್ಷಣ ಟ್ರಸ್ಟ್ ವತಿಯಿಂದ ಈಗಾಗಲೇ ಹಲವು ಕಾರ್ಯಾಗಾರಗಳು ನಡೆದಿದ್ದು, ಮೂರು ವರ್ಷ ಕಲಿತದ್ದು ನೂರು ವರ್ಷಗಳ ಜೀವನಾನುಭವ ನೀಡುತ್ತದೆ  ಎಂಬ ಪರಿಕಲ್ಪನೆಯಲ್ಲಿ ಎಲ್ಲ ವರ್ಗದ ಬೋಧಕರಿಗೂ ಇಂಥ ಪುನಶ್ಚೇತನ ಕಾರ್ಯಾಗಾರಗಳು ನಿರಂತರವಾಗಿ ನಡೆದು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಸಂಕಲ್ಪವನ್ನು ಹೊಂದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸಿ.ಶ್ರೀನಿವಾಸ್, ಭಾನುಕುಮಾರ್, ಗೋಪಾಲಗೌಡ, ಚಂದ್ರಶೇಖರ ಆಚಾರ್ಯ ಮತ್ತಿತರರಿದ್ದರು.

ಮೂರು ದಿನಗಳ ಈ ಕಾರ್ಯಾಗಾರದಲ್ಲಿ 15 ಮಂದಿ ಸಂಪನ್ಮೂಲ ವ್ಯಕ್ತಿಗಳು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ 58 ಶಾಲೆಗಳಿಂದ 360ಕ್ಕೂ ಹೆಚ್ಚು ಶಿಕ್ಷಕರು  ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು