11:58 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸಮಾಜಮುಖಿ ಸೇವೆ: ಅಭಿನಂದನ್ ಶಿಕ್ಷಣ ಸಂಸ್ಥೆಯ ರಾಮಣ್ಣ ಹಂಪರಗುಂದಿಗೆ ಶ್ರೀಗಳಿಂದ ಮೆಚ್ಚುಗೆ

15/06/2021, 19:12

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಅಂತರಗಂಗೆ

Info.reporterkarnataka@gmail.com

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ತಮ್ಮ ಜೀವನದ ಹಂಗು ತೊರೆದು ಅಭಿನಂದನ್ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಅವರು ಮಿತ್ರರೊಂದಿಗೆ ಸೇರಿಕೊಂಡು ಸಮಾಜಮುಖಿ ಕೆಲಸ ಮಾಡಿದ್ದಾರೆ. ಬಡಜನರ ಸೇವೆ ಹಾಗೂ ಪರಿಸರ ರಕ್ಷಣೆಯ ಮೂಲಕ ಅವರು ಇಂದು ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಸಂತೋಷದ ವಿಷಯ ಎಂದು ಬೆಳಗಾಂ ರಾಮದುರ್ಗ ಬಾಗೋಜಿಕೊಪ್ಪ ಹಿರೇಮಠ್ ಸಂಸ್ಥಾನದ ಡಾ. ಶಿವಲಿಂಗ ಶಿವಾಚಾರ್ಯ ದೇವರು ಮೆಚ್ಚಿಗೆ ವ್ಯಕ್ತಪಡಿಸಿದರು.

ರಾಮಣ್ಣ ಅವರು ಕೊರೊನಾ ಮೊದಲನೆ ಅಲೆಯಲ್ಲಿಯೂ ಸಾಕಷ್ಟು ಸಹಾಯ ಮಾಡಿದ್ದು, ಎರಡನೆ ಅಲೆಯ ಸಂದರ್ಭದಲ್ಲಿ ಪ್ರತಿ ಬಡ ಕುಟುಂಬಗಳಿಗೆ ತಾಲೂಕಿನಲ್ಲಿ ತಮ್ಮದೇ ಆದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಟ್ಟಿ ಸಹಾಯಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಸಂಸ್ಥೆಯು ಇದೀಗ ಜಿಲ್ಲಾ ಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅವರ ಸೇವೆ ಅಪಾರವಾದದ್ದು ಎಂದು ಸಾರ್ವಜನಿಕರಿಂದ ಧ್ವನಿ ಕೇಳಿಬರುತ್ತದೆ. ಇವತ್ತು ಲಾಕ್ ಡೌನ್ ಸಮಯದಲ್ಲಿ ಜನಪ್ರತಿನಿಧಿಗಳು ಮಾಡಲಾಗದಂತಹ ಕೆಲಸವನ್ನು ಒಬ್ಬ ಸಮಾಜ ಸೇವಕ ಮಾಡುತ್ತಿದ್ದಾರೆ ಎಂದರೆ ಅದು ಸಮಾಜ ಮೆಚ್ಚುವಂತ ಕೆಲಸ. ಅದು ಪುಣ್ಯದ ಕೆಲಸ ಎಂದು ಸ್ವಾಮೀಜಿ ನುಡಿದರು.

ಜನರೊಂದಿಗೆ ಮೂಕ ಪ್ರಾಣಿಗಳ ರೋಧನವನ್ನೂ ಅವರು ಅರ್ಥ ಮಾಡಿಕೊಂಡಿದ್ದಾರೆ. ಪರಿಸರದ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. 10 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುತ್ತಿದ್ದಾರೆ. ನೆಟ್ಟ ಸಸಿಗಳಿಗೆ ಬೇಲಿ ಹಾಕಿ ಅದನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಸಮಾಜಮುಖಿ ಕೆಲಸ ಮಾಡುವ ರಾಮಣ್ಣನವರಿಗೆ ಒಳ್ಳೆಯದಾಗಲಿ ಎಂದು ಸ್ವಾಮೀಜಿ ಹಾರೈಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು