ಇತ್ತೀಚಿನ ಸುದ್ದಿ
ರಾಜ್ಯಕ್ಕೂ ‘ಅಸಾನಿ’ ಚಂಡಮಾರುತ ಭೀತಿ: ಮುಂದಿನ 3-4 ದಿನಗಳ ಕಾಲ ಭಾರೀ ಮಳೆ ನಿರೀಕ್ಷೆ
10/05/2022, 22:11
ಬೆಂಗಳೂರು( reporterkarnataka.com):- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪರಿಣಾಮವಾಗಿ ಓಡಿಶಾ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಭೀತಿ ಎದುರಾಗಿದ್ದು, ಈಗಾಗಲೇ ಓಡಿಶಾ, ಆಂಧ್ರಪ್ರದೇಶದಲ್ಲಿ ಆರ್ಭಟಿಸುತ್ತಿರುವಂತ ಅಸಾನಿ ಚಂಡಮಾರುತ, ಕರ್ನಾಟಕಕ್ಕೂ ಕಾಲಿಡಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸಾನಿ ಚಂಡಮಾರುತದ ಪರಿಣಾಮ ಮುಂದಿನ 3-4 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ. ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಅತಿಹೆಚ್ಚು ಮಳೆಯಾಗುವುದರಿಂದ, ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಿದೆ.ಅಸಾನಿ ಚಂಡಮಾರುತದ ಪರಿಣಾಮದಿಂದ ಕಡಲ ಅಲೆಗಳ ಆರ್ಭಟ ಹೆಚ್ಚಿರಲಿದೆ. ಜೊತೆಗೆ ಗಾಳಿ ಕೂಡ ಜೋರಾಗಿರಲಿದೆ. ಹೀಗಾಗಿ ಮೀನುಗಾರಿಕೆಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆಯೂ ಎಚ್ಚರಿಕೆ ನೀಡಿದೆ.