1:59 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಮದುವೆ ಛತ್ರದಲ್ಲಿ ನಾಟಕ ಮಾಡ್ಲಿಕ್ಕಾಗುತ್ತಾ ? ಮಂಗಳೂರಿಗೂ ರಂಗ ಮಂದಿರ ಬೇಕು : ಅಡ್ಡಂಡ ಕಾರ್ಯಪ್ಪ

10/05/2022, 21:37

ಮಂಗಳೂರು(ReporterKarnataka.com) ಮಂಗಳೂರಿಗೂ ರಂಗ ಮಂದಿರ ಬೇಕು. ಮದುವೆಯ ಛತ್ರದಲ್ಲಿ ನಾಟಕ ಮಾಡ್ಲಿಕೆ ಆಗುತ್ತಾ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ.

ಅವರು ಮಂಗಳವಾರ ನಗರದ ಪುರಭವನದಲ್ಲಿ ಪ್ರದರ್ಶನಗೊಂಡ ಪರ್ವ ಮಹಾ ರಂಗ ಪ್ರಯೋಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಗಳೂರಿಗೂ ರಂಗ ಮಂದಿರ ಬೇಕೆಂಬ ಕೂಗು ನಲ್ವತ್ತು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಇನ್ನೂ ಸಾಕಾರಗೊಂಡಿಲ್ಲ, ಇಲ್ಲಿಯ ಕಲಾವಿದರೊಂದಿಗೆ ನಾನೂ ಧ್ವನಿಗೂಡಿಸುತ್ತಿದ್ದೇನೆ, ಲಕ್ಷಗಟ್ಟಲೆ ಹಣ ಖರ್ಚು ಮಾಡಿ ನಾಟಕ ಪ್ರದರ್ಶನ ಮಾಡುವುದು ಸುಲಭ ಸಾಧ್ಯವಲ್ಲ, ಸಂಸ್ಕೃತಿ ಸಚಿವರಿಗೂ ಈ ಕೂಗು ಕೇಳಲಿ ರಂಗಮಂದಿರ ನಿರ್ಮಾಣವಾಗಲಿ ಎಂದರು.


ಎಸ್.ಎಲ್.ಭೈರಪ್ಪನವರಂತಹ ಮೇರು ಸಾಹಿತಿಯ ಮಹಾ ಕಾವ್ಯ ಪರ್ವವನ್ನು ರಂಗದಲ್ಲಿ ಬಿತ್ತರಿಸುವುದು ಕಠಿಣ ಕಾರ್ಯವಾಗಿತ್ತು ಅದನ್ನು ಬಹಳ ನಾಜೂಕಾಗಿ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾಡಿದ್ದಾರೆ‌. ಮಂಗಳೂರಿನಲ್ಲಿ ಇದು 33ನೇ ಪ್ರದರ್ಶನ ಕಾಣುತ್ತಿದೆ ಎಂದರು.


ಈ ಸಂದರ್ಭ ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ, ತುಳು ರಂಗಭೂಮಿ ನಟ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು