ಇತ್ತೀಚಿನ ಸುದ್ದಿ
ಬಣಕಲ್: ಜಮೀನು ವಿವಾದ; ಜಗಳ ಬಿಡಿಸಲು ಬಂದ ಬಾಲಕಿಯ ಮೇಲೆ ಕತ್ತಿಯಿಂದ ಹಲ್ಲೆ
10/05/2022, 20:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಣಕಲ್ ಠಾಣಾ ವ್ಯಾಪ್ತಿಯ ತರುವೆ ಗ್ರಾಮದ ದೇವನಗೂಲ್ ನಲ್ಲಿ ಜಮೀನು ವಿಚಾರವಾಗಿ ಉಂಟಾದ ಕಲಹದಲ್ಲಿ ಬಾಲಕಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಬಾಲಕಿಯನ್ನು ಎಂಜಿಎಂ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ದೇವನಗೂಲ್ ಗ್ರಾಮದ ರಮೇಶ್ ಹಾಗೂ ಜಯಂತ್ ಸಹೋದರರ ನಡುವೆ ಜಮೀನು ವಿಚಾರವಾಗಿ ಕಲಹ ಉಂಟಾಗಿದ್ದು, ಈ ವೇಳೆ ಕಲಹ ಬಿಡಿಸಲು ಬಂದ ಬಾಲಕಿಯ ಮೇಲೆ ಜಯಂತ್ ಅವರ ಪುತ್ರ ಜ್ಞಾನದೇವ್ ಎಂಬಾತನು ಕತ್ತಿಯಿಂದ ಹಲ್ಲೆ ಮಾಡಿಲಾಗಿದೆ ಎಂದು ದೂರು ನೀಡಲಾಗಿದೆ. ಬಾಲಕಿಯ ಅಂಗೈಗೆ ಗಾಯವಾಗಿದ್ದು ಘಟನೆ ಸಂಬಂಧ ಜಯಂತ್, ಮಧುರ ಹಾಗೂ ಜ್ಞಾನದೇವ್ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.














