ಇತ್ತೀಚಿನ ಸುದ್ದಿ
ಅರಬ್ಬೀ ಸಮುದ್ರ ಪ್ರಕ್ಷುಬ್ಧ: ಉಡುಪಿ ಜಿಲ್ಲೆಯ ಬೀಚ್ ಜಲಕ್ರೀಡೆ ಬಂದ್; ಸೈಂಟ್ ಮೆರೀಸ್ ಬೋಟ್ ಯಾನ ಸ್ಥಗಿತ
10/05/2022, 10:08
ಉಡುಪಿ(reporterkarnataka.com):
ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡ ಕಾರಣ ಮಲ್ಪೆ ಬೀಚ್ ಸಹಿತ ಜಿಲ್ಲೆಯ ವಿವಿಧ ಬೀಚ್‌ಗಳಲ್ಲಿ ಜಲ ಸಾಹಸ ಕ್ರೀಡೆ ಹಾಗೂ ಸೈಂಟ್ ಮೆರೀಸ್ ದ್ವೀಪ ಯಾನವನ್ನು ಜಿಲ್ಲಾಡಳಿತದ ಮುಂದಿನ ಆದೇಶದ ತನಕ ಸ್ಥಗಿತಗೊಳಿಸಿದೆ.
ಚಂಡಮಾರುತದ ಪ್ರಭಾವದಿಂದಾಗಿ ಜಲ ಕ್ರೀಡೆ ಹಾಗೂ ಸೈಂಟ್ ಮೇರೀಸ್ ದ್ವೀಪಕ್ಕೆ ಮಲ್ಪೆಯಿಂದ ಬೋಟ್‌ನಲ್ಲಿ ಕರೆದೊಯ್ಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಚಂಡಮಾರುತದ ಪ್ರಭಾವ ತಗ್ಗಿದ ಬಳಿಕ ಮತ್ತೆ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಲ್ಪೆ ಸಹಿತ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇವರೆಲ್ಲ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋಗುತ್ತಿದ್ದಾರೆ. ಆದರೆ ಟೋಲ್ ಗೇಟ್ ಮೂಲಕ ಬಂದವರೆಲ್ಲ ವಾಪಸ್ ಹೋಗುವಾಗ ಸುಂಕ ಕಟ್ಟಲೇ ಬೇಕು.
ಈ ನಡುವೆ ರಾಜ್ಯದ ಪ್ರಥಮ ತೇಲು ಸೇತುವೆ ಎಂಬ ಹೆಗ್ಗಳಿಕೆ ಪಡೆದ ಮಲ್ಪೆ ಬೀಚ್ ಫ್ಲೋಟಿಂಗ್ ಬ್ರಿಡ್ಜ್ ಉದ್ಘಾಟನೆಗೊಂಡ 3 ದಿನಗಳಲ್ಲಿ ಕಳಚಿಕೊಂಡಿಲ್ಲ. ಚಂಡಮಾರುತದಿಂದ ಹಾನಿಯಾಗುವುದನ್ನು ತಪ್ಪಿಸಲು ಸೆಂಟರ್ ಲಾಕ್ ಕಳಚಲಾಗಿದೆ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ನಿರ್ವಹಣಾ ಉಸ್ತುವಾರಿ ಸುದೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಮಲ್ಪೆಯ ತೇಲುವ ಸೇತುವೆಗೆ ಅಲೆಗಳ ಅಬ್ಬರದಿಂದ ಹಾನಿಯಾಗಿತ್ತು ಎನ್ನಲಾಗಿತ್ತು. ಆದರೆ, ಸೈಕ್ಲೋನ್‌ನಿಂದ ಆಗುವ ಹಾನಿಯನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿಯೇ ಸೇತುವೆಯ ಬ್ಲಾಕ್‌ಗಳನ್ನು ಕಳಚಲಾಗುತ್ತಿದೆ ಎಂದು ನಿರ್ವಹಣಾ ಸಮಿತಿಯ ಸುದೇಶ್ ಶೆಟ್ಟಿ ಹೇಳಿದ್ದಾರೆ.