ಇತ್ತೀಚಿನ ಸುದ್ದಿ
ತೈವಾನ್ – ಜಪಾನ್ ನಡುವಿನ ಸಮುದ್ರಭಾಗದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು; ಸುನಾಮಿ ಭಯ ಇಲ್ಲ
09/05/2022, 23:37
ಟೋಕಿಯೊ(reporterkarnataka.com): ಪೂರ್ವ ತೈವಾನ್ ಮತ್ತು ನೈಋತ್ಯ ಜಪಾನ್ ನಡುವಿನ ಸಮುದ್ರದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನ ಬಲವಾಗಿದ್ದರೂ ಸುನಾಮಿ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತೈವಾನ್‌ನಿಂದ ಪೂರ್ವಕ್ಕೆ 110 ಕಿಲೋಮೀಟರ್ (66 ಮೈಲುಗಳು) ದೂರದಲ್ಲಿರುವ ಯೋನಾಗುನಿ ದ್ವೀಪದ ದಕ್ಷಿಣ ಮತ್ತು ಪಶ್ಚಿಮದ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆಯು 6.1 ನಷ್ಟಿತ್ತು. ಸಮುದ್ರದ 27 ಕಿಲೋಮೀಟರ್ (17 ಮೈಲಿ) ಆಳದಲ್ಲಿ ಸಂಭವಿಸಿತು ಎಂದು ತೈವಾನ್‌ನ ಕೇಂದ್ರ ಹವಾಮಾನ ಬ್ಯೂರೋ ಹೇಳಿದೆ. ಭೂಕಂಪದ ತೀವ್ರತೆ 6.3 ರಷ್ಟಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ಸುನಾಮಿಯ ಅಪಾಯವಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ಸ್ಪಷ್ಟಪಡಿಸಿದೆ. ನೀರಿನಲ್ಲಿ ಅಲೆಗಳ ಉಬ್ಬರ ಏಳಬಹುದು. ಆದರೆ ಸುನಾಮಿ ಅಪಾಯವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.