4:40 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸರಕಾರಿ ಜಾಬ್ ಗಳ ಮಾರಾಟ ಮಾಡುವ ಗ್ಯಾಂಗ್‌ನ್ನು ಹೊರಗೆ ತರ್ತೇವೆ; ದಿವ್ಯ ಹಾಗರಗಿ ಆಸ್ತಿ ಮುಟ್ಟುಗೋಲು: ಗೃಹ ಸಚಿವ

29/04/2022, 00:20

ಬೆಂಗಳೂರು(reporterkarnataka.com): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕುರಿತಂತೆ ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ. ನಾನೇ ಸ್ವತಃ ಈ ಬಗ್ಗೆ ತೀರ್ಮಾನ ಮಾಡಿ, ಸಿಎಂ ಗಮನಕ್ಕೆ ತಂದು ಮಾಡಿದ್ದೇವೆ. ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್‌ನ್ನು ಹೊರಗೆ ತರ್ತೇವೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಅವರು, ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಇದುವರೆಗೂ ದಿವ್ಪ್ಕ್ಸ, ದಿವ್ಯ ಹಾಗರಗಿ ಸ್ಟ್ರಾಂಗ್ ಏನಿಲ್ಲ. ಅವ್ರು ಊರು ಬಿಟ್ಟಿದ್ದಾರೆ. ಈಗಾಗಲೇ ಅವರಿಗೆ ಅರೆಸ್ಟ್ ವಾರೆಂಟ್ ಕೊಟ್ಟಿದ್ದಾರೆ. ಶೀಘ್ರವೇ ಅವರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಯುವತಿಯ ಮೇಲೆ ಆಯಸಿಡ್ ದಾಳಿ ಬಗ್ಗೆ ಮಾತನಾಡಿದ ಅವರು, ನಾಗೇಶ್ ಎಂಬುವ ಯುವಕ ಯುವತಿ ಮೇಲೆ ಆಸಿಡ್ ಹಾಕ್ತಾನೆ. ನಾನು ಪ್ರೀತಿಸ್ತಿದ್ದೆ, ಮದುವೆಯಾಗಬೇಕು ಅಂತಾ ಆಸಿಡ್ ಹಾಕಿದ್ದಾನೆ. ಇದೊಂದು ಅಮಾನುಷ ಕೃತ್ಯ, ಪೊಲೀಸರು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಿಚಾರಣೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹಾಜರಾಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕಾ ಖರ್ಗೆ ಅನೇಕ ಆರೋಪ ಮಾಡಿದ್ದಾರೆ. ಸಿಐಡಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಇವ್ರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಅವ್ರು ದಾಖಲೆ ಕೊಡಬಹುದು ಅಲ್ವಾ..? ಅವ್ರ ತಂದೆ ಎಷ್ಟು ದೊಡ್ಡವರು..? ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ವಾ..? ಅವರನ್ನು ಏನು ಅರೆಸ್ಟ್ ಮಾಡ್ತಾರಾ..? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರೋದ ದಾಖಲೆ ಕೊಡಲಿ. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರೀ..? ಎಂದು ಕಿಡಿಕಾರಿದರು.

ಅಮೃತ್ ಪೌಲ್ ವರ್ಗಾವಣೆ ವಿಚಾರವಾಗಿ ಮಾತನಾಡಿ, ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ಹಾಗಂತ ಅವರನ್ನು ಅಪರಾಧಿ ಅನ್ನೋದು ಸರಿಯಲ್ಲ. ತನಿಖೆಯಲ್ಲಿ ಯಾರ ಹೆಸರು ಬರುತ್ತೋ ಅವರೇ ತಪ್ಪಿತಸ್ಥರು ಆಗ್ತಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು