7:30 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಿಂಧನೂರು: ಗಾಂಜಾ ತಪಾಸಣೆ ಎಂದು ರೈತನ ಅಡ್ಡಗಟ್ಟಿದ ಇಬ್ಬರು ಅಪರಿಚಿತ ವ್ಯಕ್ತಿಗಳಿಂದ 48,500 ರೂ. ನಗದು ಲೂಟಿ

14/06/2021, 15:01

ಡಿ. ಶರಣ ಗೌಡ ಗೊರಬಾಳ್ ಸಿಂಧನೂರು

info.reporterkarnataka@gmail.com

ಸಿಂಧನೂನು ತಾಲೂಕಿನ ಸಾಸಲಮರಿ ಗ್ರಾಮದ ಸಮೀಪ ಬೈಕ್ ನಲ್ಲಿ ಬರುತ್ತಿದ್ದ ರೈತರೊಬ್ಬರನ್ನು ಅಡ್ಡಗಟ್ಟಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅವರಿಂದ 48,500 ರೂ. ನಗದು ಎಗರಿಸಿದ್ದಾರೆ.

ಮಲ್ಕಪುರ ಗ್ರಾಮದ ಸುಮಾರು 60ರ ಹರೆಯದ ಪಂಪಣ್ಣ ಎಂಬ ರೈತರು ಗೊರೆಬಾಳ ಗ್ರಾಮದಿಂದ ಭತ್ತ ಮಾರಿದ(ನೆಲ್ಲ ಪಟ್ಟಿ)ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಲೂಟಿ ಮಾಡಲಾಗಿದೆ. ಸೋಮವಾರ ಬೆಳಗ್ಗೆ 8.20 ಸುಮಾರಿಗೆ ಪಂಪಣ್ಣ ಅವರು ಶ್ರೀಪುರಂ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ  ಪೆಟ್ರೋಲ್ ಹಾಕಿಸಿಕೊಂಡು ಎಕ್ಸೆಲ್ ಸೂಪರ್ ಬೈಕ್ ನಲ್ಲಿ ಮಲ್ಕಪುರ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಪಂಪಣ್ಣ ಅವರ ಬೈಕನ್ನು ತಡೆದು ನಿಲ್ಲಿಸಿ ಅಧಿಕಾರಿಗಳ ರೀತಿಯಲ್ಲಿ ‘ನೀನು ಗಾಂಜಾ ಸಾಗಣಿಕೆ ಮಾಡುತ್ತಿದ್ದು ನಿನ್ನನ್ನು ತಪಾಸಣೆ ತಪಾಸಣೆ ಮಾಡಬೇಕು’ ಎಂದು ಬೆದರಿಸಿ ರೈತನ ಬಳಿ ಇರುವ 48,500ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು