1:55 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕುರ್ಚಿಗಾಗಿ ಬಿಜೆಪಿ – ಕಾಂಗ್ರೆಸ್ ಹೊಡೆದಾಟ:  ಜನತಾ ದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯ

27/04/2022, 17:42

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಜೆಡಿಎಸ್‌ಗೆ ಇರುವುದು ರಾಜ್ಯದ ಪ್ರತಿ ಜಿಲ್ಲೆಗೂ ನೀರಾವರಿ ಯೋಜನೆ ಕಲಿಸಬೇಕು ಎಂಬುದು . ಕಮಲಕ್ಕೆ ಸುರ್ಯೋದಯನ ಚಿಂತೆಯಾದರೆ ಚತುರಂಗಿಗೆ ಚಂದ್ರೋದಯನ ಚಿಂತೆ , ದೇವೇಗೌಡರಿಗೆ ರೈತರ ಚಿಂತೆಯಾದರೆ ಕಾಂಗ್ರೆಸ್‌ನವರಿಗೆ ಕುರ್ಚಿ ಚಿಂತೆಯಾಗಿದೆ. ಇರೋ
ಒಂದು ಕುರ್ಚಿಗೆ ಇಬ್ಬರು ಹೊಡೆದಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು . ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ಒಂದೊಂದು ಚುನಾವಣೆಗೆ ಒಂದೊಂದು ಪಕ್ಷದಪರ ಕೆಲಸ ಮಾಡುತ್ತಾರೆ . ಕಾಂಗ್ರೆಸ್ ಬಂದರೆ ಇಲ್ಲಿ ನಿಂತುಕೊಳ್ಳುತ್ತಾರೆ . ಬಿಜೆಪಿ ಬಂದರೆ ಅಲ್ಲೂ ನಿಂತುಕೊಳ್ಳುತ್ತಾರೆ. ಅವರು ಎಲ್ಲೂ ಇರೊದಿಲ್ಲ ಎಂದು ನಪುಂಸಕನ ಕಥೆ ಮೂಲಕ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವ ಪಕ್ಷದ ದಲಿತ ಮುಖಂಡರನ್ನು ಸೋಲಿಸಿದ್ದಾರೆ ಎಂದರು.

ಬಿಜೆಪಿ ಬಿಟೀಂ ಎಂದು ನಮ್ಮನ್ನು ಹೀಯಾಳಿಸಿದರು . ಆಗ ಮುನಿಯಪ್ಪನವರ ಪರ ಬಂದಿದ್ದು ನಾನು ಒಬ್ಬನೇ . ಮುನಿಯಪ್ಪ ದಲಿತ ಎಂಬ ಕಾರಣಕ್ಕೆ ರಮೇಶ್ ಕುಮಾರ್‌ ಮತ್ತು ತಂಡ ವಿರೋಧ ಮಾಡಿ ಮುನಿಸ್ವಾಮಿ ಅವರನ್ನು ಗೆಲ್ಲಿಸಿದರು . ಇದಕ್ಕೆ ಮುನಿಯಪ್ಪ ನವರನ್ನು ಇಲ್ಲಿಗೆ ಬಂದು ಬಿಡಿ ಎಂದು ಆಹ್ವಾನಿಸಿದೆ ಎಂದು ಹೇಳಿದರು.

2022 ಅಥವಾ 2023 ರಲ್ಲಿ ಚುನಾವಣೆ ನಡೆದರು ಎಚ್.ಡಿ.ಕುಮಾರಸ್ವಾಮಿ ಅವರೆ ಸಿಎಂ ಆಗುವುದು ಖಚಿತ . ಜೊತೆಗೆ ಶ್ರೀನಿವಾಸಪುರ ಕ್ಷೇತ್ರದಲ್ಲಿ ಜಿ.ಕೆ.ವೆಂಕಟಶಿವಾ ರೆಡ್ಡಿಯವರನ್ನು ಅಧಿಕ ಮತಗಳಿಂದ ಗೆಲ್ಲಿಸಿಕೊಳ್ಳ ಬೇಕು ಎಂದು ಕರೆ ನೀಡಿದರು .

ಹಿಂದೆ 1972 ರಲ್ಲಿ ಸಮತ ಕಾಂಗ್ರೆಸ್‌ನಿಂದ ಬಚ್ಚಾರೆಡ್ಡಿ ಎಂಬುವರು ಶಾಸಕರಾಗಿದ್ದರು . ಅವರು ನಮ್ಮವರೆ . ಆಗಿನಿಂದಲೂ ನಾನು ಇಲ್ಲಿಗೆ ಬಂದು ಹೋಗುತ್ತಿದ್ದೆನೆ . ಈ ಸಮತ ನಾನು ಬಂದಿರುವುದು ಹೊಸದಲ್ಲ . ಜನತಾ ದಳ ಯಾರ ಪಕ್ಷ . ಇತ್ತೀಚಿನ ದಿನಗಳಲ್ಲಿ ಒಂದೊಂದು ಪಕ್ಷದವರು ಒಂದೊಂದು ರೀತಿ ಮಾತಾಡುತ್ತಾರೆ . ಅವರಿಗೆ ಮನಸ್ಥಿತಿ ಸರಿಯಿಲ್ಲ ಎಂದು ಕಿವಿಟಿದರು . ಬಿಜೆಪಿ ಬಗ್ಗೆ ಮಾತಾಡುತ್ತಿಲ್ಲ. ಅವರ , ಇವರ ಬಗ್ಗೆ ಮಾತ ನಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಪರ್ಸಂಟೇಜ್ ತೆಗೆದುಕೊಂಡಿಲ್ವ . ಇದನ್ನೆ ನೋಡೆ ನಾನು ಕಾಂಗ್ರೆಸ್ ಬಿಟ್ಟಿದ್ದು . ದೇವೇಗೌಡರು 70 ವರ್ಷದ ರಾಜಕೀಯದಲ್ಲಿ 10 ಪೈಸೆ ತಿಂದಿದ್ದರೆ ಸಾಕ್ಷಿ ನೀಡಿದರೆ ರಾಜ್ಯದಲ್ಲಿ ಕುರ್ಚಿಗಾಗಿ ಬಿಜೆಪಿ – ಕಾಂಗ್ರೆಸ್ ಹೊಡೆದಾಟ:  ಜನತಾ ದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯ

ಇತ್ತೀಚಿನ ಸುದ್ದಿ

ಜಾಹೀರಾತು