ಇತ್ತೀಚಿನ ಸುದ್ದಿ
ಮಂಗಳೂರು ನವ ಭಾರತ ಸರ್ಕಲ್ ಬಳಿ ಪುರಾತನ ಬಾವಿ ಪತ್ತೆ: ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಬೆಳಕಿಗೆ
12/06/2021, 19:18
ಮಂಗಳೂರು(reporterkarnataka news): ನಗರದ ನವಭಾರತ ಸರ್ಕಲ್ ಬಳಿ ಸುಮಾರು 30 ಅಡಿ ಆಳದ ಪುರಾತನ ಬಾವಿ ಪತ್ತೆಯಾಗಿದೆ.
ನವಭಾರತ ಸರ್ಕಲನ್ನು ಶುಕ್ರವಾರ ರಾತ್ರಿ ಕೆಡಹಿದಾಗ ಈ ಪುರಾತನ ಬಾವಿ ಪತ್ತೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಅಗೆಯುತ್ತಿದ್ದ ವೇಳೆ ಬಾವಿ ಪತ್ತೆಯಾಗಿದೆ. ಈ ಹಿಂದೆ ಹಂಪನಕಟ್ಟೆ ತಾಜ್ ಮಹಲ್ ಹೋಟೆಲ್ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆಯೂ ಪುರಾತನ ಬಾವಿ ಪತ್ತೆಯಾಗಿತ್ತು. ಹಾಗೆ ಬೋಳಾರ. ಸಮೀಪವೂ ಪುರಾತನ ಬಾವಿ ಪತ್ತೆಯಾಗಿತ್ತು.